ಉಡುಪಿ: ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್, ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘ ,ಕರ್ನಾಟಕ ಪ್ರಾಂತ ರೈತ ಸಂಘ ಉಡುಪಿ ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ಇಂದು 77ನೇ ಸ್ವಾತಂತ್ರ್ಯೋತ್ಸವ ಅಹೋ ರಾತ್ರಿ ಧರಣಿ ಕಾರ್ಯಕ್ರಮ ಉಡುಪಿಯ ಬಸ್ ನಿಲ್ದಾಣ ಬಳಿ ನಡೆಯಿತು.
ಸಂಜೆ 6.30ರಿಂದ ಮಧ್ಯರಾತ್ರಿ12.00ಗಂಟೆವರೆಗೆ ನಡೆಸಿ ನಂತರ ಕಛೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗುತ್ತದೆ. ಕಾರ್ಯಕ್ರಮ ಉದ್ಘಾಟನೆಯನ್ನು ಉಡುಪಿಯ ಚಿಂತಕರು,ಪ್ರಗತಿಪರ ರಾದ ಫಣಿರಾಜ್ ನೆರವೇರಿಸಿದರು.
ಸಭೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ರಾದ ಕೆ.ಶಂಕರ್, ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ,ಜಿಲ್ಲಾ ಖಜಾಂಚಿ ಶಶಿಧರ ಗೋಲ್ಲ,ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷರಾದ ಶೇಖರ್ ಬಂಗೇರ,ದಯಾನಂದ ಸಿಐಟಿಯು ಉಡುಪಿ ಸಂಚಾಲಕರಾದ ಕವಿರಾಜ್. ಎಸ್,ಸಹಸಂಚಾಲಕರಾದ ಉಮೇಶ್ ಕುಂದರ್, ಬ್ರಹ್ಮವಾರ ತಾಲೂಕು ಸಂಚಾಲಕರಾದ ರಾಮ ಕಾರ್ಕಡ,ಸಹಸಂಚಾಲಕರಾದ ಸುಭಾಸ್ ನಾಯಕ್ ರೈತ ಸಂಘದ ಮುಖಂಡರಾದ ಚಂದ್ರಶೇಖರ್, ಜನವಾದಿ ಮಹಿಳಾ ಸಂಘದ ಜಿಲ್ಲಾ ಅಧ್ಯಕ್ಷರಾದ ಸರೋಜ,ಬೀಡಿ ಸಂಘ ದ ಮುಖಂಡರ ನಳಿನಿ,ಡಿ.ಗಿರಿಜ, ಬಲ್ಕೀಸ್,ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ, ಜಿಲ್ಲಾ ಮುಖಂಡರಾದ ಸದಾಶಿವ ಪೂಜಾರಿ,ವಿಶ್ವನಾಥ. ಕೆ,ಬುದ್ಯ,ಅದಮಾರು ಶ್ರೀ ಪತಿಆಚಾರ್ಯ,ಮುರಳಿ,ರಮೇಶ್,ಮೋಹನ್, ರವಿ.ಯಂ ಉಪಸ್ಥಿತರಿದ್ದರು