ಪಡು ತೋನ್ಸೆ ಗ್ರಾಮ ಪಂಚಾಯತ್’ಗೆ ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ್ 2023 ರ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ

ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ್ 2023 ರ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಶಿಫಾರಸು ಮಾಡಲ್ಪಟ್ಟಿರುವ ಉಡುಪಿ ತಾಲೂಕಿನ ಕೆಮ್ಮಣ್ಣು (ತೋನ್ಸೆ) ಗ್ರಾಮ ಪಂಚಾಯತಿಗೆ ರಾಜ್ಯ ಪ್ರಶಸ್ತಿಯನ್ನು ಇಂದು ಬೆಂಗಳೂರಿನ ವಿಧಾನ ಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು.

IMG 20231003 WA0007 Udupi

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆಯವರು ಪ್ರಶಸ್ತಿ ಪ್ರಧಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ತೋನ್ಸೆ ಗ್ರಾ ಪಂ ಕೆಮ್ಮಣ್ಣಿನ ಅಧ್ಯಕ್ಷೆ ಕುಸುಮಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲಾ, ಉಪಾಧ್ಯಕ್ಷ ಅರುಣ್ ಫೆರ್ನಾಂಡೀಸ್, ಸದಸ್ಯರುಗಳಾದ ವತ್ಸಲಾ ವಿನೋದ್, ಮಹಮ್ಮದ್ ಇದ್ರೀಸ್ ಪ್ರಶಸ್ತಿ ಸ್ವೀಕರಿಸಿದರು

Latest Indian news

Popular Stories