ಪಡುಬಿದ್ರಿ ಅದಾನಿ ಪವರ್ ಪ್ಲ್ಯಾಂಟ್ ನಲ್ಲಿ ಕ್ರೈನ್ ಅವಘಡ – ಯುವಕ ಮೃತ್ಯು, ಮೂವರಿಗೆ ಗಾಯ

ಉಡುಪಿ: ಪಡುಬಿದ್ರಿಯ ಅದಾನಿ ಪವರ್ ಪ್ಲ್ಯಾಂಟ್’ನಲ್ಲಿ ಕ್ರೈನ್ ಅವಘಡಕ್ಕೆ ಒರ್ವಯುವ ಮೃತಪಟ್ಟು, ಮೂವರಿಗೆ ಗಾಯವಾಗಿದೆ.

ರಾಜಸ್ಥಾನ ಮೂಲದ ವ್ಯಕ್ತಿ ಮೃತಪಟ್ಟರೆ,ಮೂವರು ಗಾಯಗೊಂಡ ಘಟನೆ ಸಂಭವಿಸಿದೆ.

ಕ್ರೇನ್ ನ ರೋಪ್ ತುಂಡಾಗಿ ಕಟ್ಟಡದ ಬೀಮ್ ನೆಲಕ್ಕುರುಳಿ
ಅವಘಡ ಸಂಭವಿಸಿದ್ದು, 23ರ ಹರೆಯದ ಯುವಕನೊಬ್ಬ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡು
ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನದ ವೇಳೆ ಕ್ರೇನ್ ಮೂಲಕ ರೋಪ್ ಕಟ್ಟಿಕೊಂಡು ಸುರಕ್ಷತಾ ಕ್ರಮವಾಗಿ 3 ಜನ ಕೆಲಸ ಮಾಡುತ್ತಿದ್ದರು. ಇನ್ನು ಉಳಿದ 2 ಮಂದಿ ಯಾವುದೇ ಸುರಕ್ಷತೆ ಇಲ್ಲದೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಈ ಸಂಧರ್ಭ ಕ್ರೇನ್ ನ ರೋಪ್ ತುಂಡಾಗಿ ಕಟ್ಟಡದ ಬೀಮ್ ನೆಲಕ್ಕುರುಳಿದೆ.

3 ಜನ ರೋಪ್ ನಲ್ಲಿಯೇ ಉಳಿದುಕೊಂಡಿದ್ದು, ಇನ್ನು ಉಳಿದ ಇಬ್ಬರಲ್ಲಿ ಒಬ್ಬ ರಾಜಸ್ಥಾನದ 23ರ ಹರೆಯದ ಯುವಕ ನೇರವಾಗಿ ನೆಲಕ್ಕೆ
ಬಿದ್ದು ಗಂಭೀರ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವಾಗ
ಹಾದಿಯಲ್ಲಿ ಮೃತಪಟ್ಟಿದ್ದಾನೆ.

Latest Indian news

Popular Stories