ಹಾಸನ ಜಿಲ್ಲೆಯ NDA ಅಭ್ಯರ್ಥಿ ಪ್ರಜ್ವಲ್ ನನ್ನು ಬಂಧಿಸಲು ಒತ್ತಾಯಿಸಿ SDPI ಉಡುಪಿ ಜಿಲ್ಲೆ ವತಿಯಿಂದ ಪ್ರತಿಭಟನೆ

ಹಾಸನ ಜಿಲ್ಲೆಯ NDA ಅಭ್ಯರ್ಥಿ ಪ್ರಜ್ವಲ್ ನನ್ನು ಬಂಧಿಸಲು ಒತ್ತಾಯಿಸಿ ಮತ್ತು BJPಯ ಪಕ್ಷಪಾತ ಧೋರಣೆ ಖಂಡಿಸಿ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು ಉಡುಪಿಯ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ SDPI ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಿಯಾಜ್ ಕಡಂಬುರವರು ದಿನಬೆಳಗಾದರೆ ಲವ್ ಜಿಹಾದ್ ಲವ್ ಜಿಹಾದ್ ಎಂದು ಭಾಷಣ ಬಿಗಿಯುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಪ್ರಜ್ವಲ್ ರೇವಣ್ಣ 1000 ಕ್ಕಿಂತಲೂ ಅಧಿಕ ಮಹಿಳೆಯರ ಮಾನ ಹರಾಜು ಮಾಡಿದಾಗ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಪ್ರಶ್ನಿಸಿದರು.


ಉಡುಪಿಯ ಕಾಲೇಜು ಮಕ್ಕಳ ಪುಂಡಾಟವನ್ನು ದೊಡ್ಡ ವಿವಾದವಾಗಿ ಬಿಂಬಿಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವ ಉಡುಪಿ ಶಾಸಕ ಯಶಪಾಲ್ ಸುವರ್ಣ ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಒಂದು ಮಾತೂ ಆಡದಿರುವುದು ಹಿಂದೂಗಳ ಮೇಲಿನ ಅವರ ಕಾಳಜಿ ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ಎಂಬುದನ್ನು ಬಿಂಬಿಸುತ್ತದೆ ಎಂದು ಆರೋಪಿಸಿದರು.

ಪ್ರತಿಬಟನೆಯನ್ನು ಉದ್ದೇಶಿಸಿ SDPI ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ್ ಆಲಿ ಹಾಗೂ SDPI ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹನೀಫ್ ಮೂಲೂರ್ ಮಾತನಾಡಿದರು.
ಪ್ರತಿಬಟನೆಯಲ್ಲಿ ವಿಮೆನ್ ಇಂಡಿಯ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಜಿಯಾ ನಸ್ರುಲ್ಲಾ, SDPI ಉಡುಪಿ ಜಿಲ್ಲಾ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು

Latest Indian news

Popular Stories