ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ | ಕುಂದಾಪುರ ಕಡೆಯಿಂದ ಬರುವ ಬಸ್ ಪ್ರಯಾಣಿಕರಿಗೆ “ಆಶಿರ್ವಾದ”ದಿಂದ ಸಂತೆಕಟ್ಟೆಯತ್ತ ನಡಿಗೆ ಅನಿವಾರ್ಯ!

ಸಂತೆಕಟ್ಟೆ: ಬಹು ಚರ್ಚಿತ ಸಂತೆಕಟ್ಟೆ ಅಂಡರ್ ಪಾಸ್ ಹಲವು ಆಕ್ರೋಶದ ನಂತರ ಇದೀಗ ಕುಂದಾಪುರ ಕಡೆಯಿಂದ ಉಡುಪಿಯ ಕಡೆ ಹೊರಡುವ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.ಉಡುಪಿಯಿಂದ ಕುಂದಾಪುರ ಕಡೆ ಸಾಗುವ ಹೆದ್ದಾರಿಯ ಕಾಮಗಾರಿ ಆರಂಭಿಸಲಾಗಿದೆ.

ಕುಂದಾಪುರ ಕಡೆಯಿಂದ ಬರುವ ಬಸ್’ಗಳು ಸಂತೆಕಟ್ಟೆ ಜಂಕ್ಷನ್ ನಲ್ಲಿ ನಿಲ್ಲಲು ಸಾಧ್ಯವಾಗದ ಕಾರಣ ಅಂಡರ್ ಪಾಸ್ ದಾಟಿ ಆಶಿರ್ವಾದದ ಬಳಿ ನಿಲ್ಲ ಬೇಕಾಗಿರುವುದರಿಂದ ಸಂತೆಕಟ್ಟೆ ಬರಬೇಕಿದ್ದ ಜನರಿಗೆ ಸಮಸ್ಯೆಯಾಗಿ ಉದ್ಬವಿಸಿದೆ. ಟ್ರಾಫಿಕ್ ನಡುವೆ ಸುಮಾರು ಅರ್ಧಕ್ಕಿಂತ ಹೆಚ್ಚು ಕಿ.ಲೋ ಮೀಟರ್ ನಡೆದುಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲದಿದ್ದರೆ ಮತ್ತೆ ಹಣ ಖರ್ಚು ಮಾಡಿ ಆಟೋ ರಿಕ್ಷಾ ಹತ್ತಬೇಕಾದ ಪರಿಸ್ಥಿತಿ.

ತೀವ್ರ ತಾಪಮಾನದಲ್ಲಿ ನಡೆದುಕೊಂಡು ಬರುವುದು ಸಮಸ್ಯೆಯಾದರೆ ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ ನಿರ್ಮಾಣವಾಗುವ ಸಾಧ್ಯತೆ ಇದೆ. ಈಗಾಗಲೇ ಹಲವು ಬಸ್ ಪ್ರಯಾಣಿಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಮೇಲ್ಸೆತುವೆ ಕಾಮಗಾರಿ ಆರಂಭವಾಗಿ ಪೂರ್ಣಗೊಂಡ ನಂತರ ಈ ಸಮಸ್ಯೆಗೆ ಮುಕ್ತಿ ಸಿಗುವ ಸಾಧ್ಯತೆ ಇದ್ದು ಅಲ್ಲಿಯವರೆಗೆ ಬಸ್ ನಿಂದ ಇಳಿದ ಪ್ರಯಾಣಿಕರು ನಡೆದುಕೊಂಡೆ ಸಂತೆಕಟ್ಟೆ ಕಡೆಗೆ ಧಾವಿಸಬೇಕಾಗಿರುವುದು ಅನಿವಾರ್ಯವಾಗಿದೆ.

Latest Indian news

Popular Stories