ಉಡುಪಿ: ದಿನಾಂಕ 18.07.2023 ರಂದು ನೇತ್ರ ಜ್ಯೋತಿ ಕಾಲೇಜ್ ನಲ್ಲಿ ನಡೆದ ಘಟನೆಯ ಪೊಲೀಸ್ ವಿಚಾರಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಮೂರು ಜನ ವಿದ್ಯಾರ್ಥಿನಿಯರ ಮೊಬೈಲ್ ನಿಂದ ಬೇರೆ ಮೊಬೈಲ್ ಗೆ ವಿಡಿಯೋಗಳನ್ನು ಕಳುಹಿಸಿದ ಬಗ್ಗೆ ಮೇಲ್ನೋಟಕ್ಕೆ ಯಾವುದೇ ರೀತಿಯ ವರ್ಗಾವಣೆ ಯಾಗಿಲ್ಲ ಈ ಬಗ್ಗೆ ಯಾವುದೇ ಗೊಂದಲ ಬೇಡ ವಿಡಿಯೋ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ ಕಾಲೇಜಿನ ಆಡಳಿತ ಮಂಡಳಿಯವರು ಪ್ರಕರಣ ಸಂಬಂಧ ನಮ್ಮ ಕಾಲೇಜಿನಲ್ಲಿ ತರಗತಿಯಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಮೊದಲನಿಂದಲೂ ನಿಷೇಧಿಸಿದೆ .ಘಟನೆ ನಡೆದ
ಮರುಕ್ಷಣವೇ ಪೊಲೀಸ್ ಇಲಾಖೆ ಗೆ ಅರ್ಜಿ ನೀಡಿ ವಿಚಾರಣೆಗೆ ಸಂಪೂರ್ಣ ಸಹಕಾರ ನಮ್ಮ ಕಡೇ ಯಿಂದ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರಕರಣ ಸಂಬಂಧ ಸಮಗ್ರ ರೀತಿಯಲ್ಲಿ ವಿಚಾರಣೆ ನೆಡೆಸಿದ ಪೊಲೀಸ್ ಇಲಾಖೆ ಗೂ ಧನ್ಯವಾದಗಳು,ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಕೆಲಸಂಘಟನೆಗಳು, ವ್ಯಕ್ತಿ ಗಳು ಹಂಚಿಕೊಂಡ ವಿಡಿಯೋ ಉಡುಪಿಯ ಘಟನೆಗೆ ಸಂಬಂಧಿಸಿದಲ್ಲಿ ವಿಡಿಯೋ ತಮಿಳುನಾಡಿ ನಲ್ಲಿ ನಡೆದ ಘಟನೆ , ಈ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ ,,ಈ ವಿಚಾರದಲ್ಲಿ ನಮಗೆ ಮಾರ್ಗದರ್ಶನ ಮಾಡಿದ ಹಿರಿಯರಿಗೂ,ಬೆಂಬಲಿಸಿದ ಎಲ್ಲಾ ಮಾಧ್ಯಮ ಮಿತ್ರರಿಗೂ, ಅನೇಕ ಸಂಘಟನೆಗಳ ಪ್ರಮುಖರಿಗೂ ಸದಸ್ಯರಿಗೂ ಧನ್ಯವಾದಗಳು ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ಮಾರ್ಗದರ್ಶನ ಸದಾ ನಮ್ಮ ಜೊತೆ ಇರಲಿ ಎಂದು
ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (೨) ಉಡುಪಿ ಜಿಲ್ಲೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.