Udupi

ಬೋಳದಲ್ಲಿ ಬೃಹತ್ ಶಿಲಾಯುಗದ ನಿಲ್ಸ್ ಕಲ್ ಪತ್ತೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪಿಲಿಯೂರ್ ಎಂಬಲ್ಲಿ ನಿಲ್ಸ್ ಕಲ್ ಕಂಡು ಬಂದಿದೆ. ಇದು 5ಅಡಿ ಎತ್ತರವಿದೆ. ನೈಸರ್ಗಿಕ ಶಿಲೆಯನ್ನು ಪೂರ್ವೋತ್ತರವಾಗಿ ಸ್ವಲ್ಪ ಬಾಗಿಸಿ ನಿಲ್ಲಿಸಲಾಗಿದೆ. ಕೇಳಭಾಗದಲ್ಲಿ ಒಂದೂವರೆ ಅಡಿ ಅಗಲವಿದೆ. ನಿಲ್ಸ್ ಕಲ್ಲಿನ ಮೆಲ್ಬಾಗ ತ್ರಿಕೋನಾಕೃತಿಯಲ್ಲಿದೆ. ಸ್ಥಳೀಯರು ಇದನ್ನು ಗೋಕಲ್ ಎಂದು ಕರೆಯುತ್ತಾರೆ. ಹಿಂದೆ ಈ ನಿಲ್ಸ್ ಕಲ್ ನ ಹತ್ತಿರ ಒಂದು ಕಾಲುದಾರಿ ಇತ್ತು ಹಾಗು ಗುಡ್ಡೆಗೆ ಮೇಯಲು ಹೋಗುವ ದನಗಳು ಈ ಕಲ್ಲಿಗೆ ಮೈ ಉಜ್ಜಿಕೊಂಡು ಹೋಗುತ್ತಿದ್ದವು ಹಾಗಾಗಿ ಇದಕ್ಕೆ ಗೋಕಲ್ ಎಂಬ ಹೆಸರು ಬಂತು ಅಭಿಪ್ರಾಯ ಎಂಬ ಸ್ಥಳೀಯರಿಂದ ವ್ಯಕ್ತವಾಗುತ್ತದೆ.

ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಬಸ್ರುರು,ಕೊಲ್ಲೂರು,ನಿಂತಿಕಲ್ ಮುಂತಾದ ಕಡೆ ದೊರೆಯುವ ನಿಲ್ಸ್ ಕಲ್ಲನ್ನು ಸಂಪೂರ್ಣವಾಗಿ ಹೋಲುತ್ತದೆ. ಪುರಾತತ್ವ ವಿದ್ಯಾರ್ಥಿಗಳಾದ ಗೌತಮ್, ಕಾರ್ತಿಕ್, ಶ್ರೇಯಸ್ ರವೀಂದ್ರ ಈ ಪುರಾತತ್ವ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button