ಶಿರ್ವ ಗ್ರಾಪಂ ಅಧ್ಯಕ್ಷರಾಗಿ ಸವಿತಾ ಪೂಜಾರಿ, ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್

ಉಡುಪಿ, ಆ.23: ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸವಿತಾ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್ ಆಯ್ಕೆಯಾದರು.

ಶಿರ್ವ ಗ್ರಾಪಂನಲ್ಲಿ 34 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸವಿತಾ ಪೂಜಾರಿ, ಬಿಜೆಪಿ ಬೆಂಬಲಿತ ಆಶಾ ಆಚಾರ್ಯ ವಿರುದ್ಧ ಸ್ಫರ್ಧಿಸಿ 20-14 ಅಂತರದಿಂದ ಹಾಗೂ ಉಪಾಧ್ಯಕ್ಷರಾಗಿ ಮಾಜಿ ಜಿಪಂ ಸದಸ್ಯ ವಿಲ್ಸನ್ ರೋಡ್ರಿಗಸ್ ಎದುರಾಳಿ ರಾಜೇಶ್ ಶೆಟ್ಟಿ ವಿರುದ್ಧ ಸ್ಫರ್ಧಿಸಿ 19-15 ಅಂತರ ದಿಂದ ಚುನಾಯಿತರಾದರು.

ಚುನಾವಣಾಧಿಕಾರಿಯಾಗಿ ಉಡುಪಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಗಿರೀಶ್, ಉಪ ಚುನಾವಣಾಧಿಕಾರಿಯಾಗಿ ಪಂ.ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ಸಹಕರಿಸಿದರು. ಪಂಚಾಯತ್ ಕಾರ್ಯದರ್ಶಿ ಚಂದ್ರಮಣಿ ಇದ್ದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ನಾಯಕರಾದ ಅಶೋಕ್‌ಕುಮಾರ್ ಕೊಡವೂರು, ನವೀನ್ ಚಂದ್ರ ಸುವರ್ಣ, ಪ್ರಶಾಂತ್ ಜತ್ತನ್ನ, ಸುನಿಲ್ ಬಂಗೇರ, ಇಗ್ನೇಷಿಯಸ್ ಡಿಸೋಜ, ಶರ್ಫುದ್ಧಿನ್ ಶೇಖ್, ಮಾಜಿ ಅಧ್ಯಕ್ಷರಾದ ಕೆ.ಆರ್.ಪಾಟ್ಕರ್, ಹಸನಬ್ಬಶೇಖ್, ರತನ್ ಶೆಟ್ಟಿ, ಮೆಲ್ವಿನ್ ಡಿಸೋಜ, ಅಶೋಕ್ ನಾರಿ ಮೊದಲಾದವರು ಉಪಸ್ಥಿತರಿದ್ದರು

Latest Indian news

Popular Stories