ಬ್ರಿಟಿಷ್ ಲೂಟಿಕೋರರು ಉಪಯೋಗ ಮಾಡಿದ ಹೆಸರು ಇಟ್ಟಿದ್ದಾರೆ – ಶೋಭಾ ಕರಂದ್ಲಾಜೆ

ಉಡುಪಿ: ದೇಶವನ್ನು 60 ವರ್ಷ ಲೂಟಿ ಮಾಡಿದವರು ಇಂದು ಒಂದಾಗಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ಮತ್ತೆ ಬಿರುಸಿನ ಪ್ರಚಾರ ಶುರು ಮಾಡಿದ್ದಾರೆ. ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರು ಇಟ್ಟುಕೊಂಡಿದ್ದಾರೆ. ಬ್ರಿಟಿಷ್ ಲೂಟಿಕೋರರು ಉಪಯೋಗ ಮಾಡಿದ ಹೆಸರು ಇಟ್ಟಿದ್ದಾರೆ. ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿ ಮಾಡಿದ್ದರು. ಈಗ ಹೊಸ ಈಸ್ಟ್ ಇಂಡಿಯಾ ಕಂಪನಿ ಶುರುವಾಗಿದೆ. ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದ ಸಾರ್ವಭೌಮತೆಯನ್ನು ಇಡೀ ಪ್ರಪಂಚಕ್ಕೆ ಪಸರಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಒಟ್ಟಾಗಿದ್ದಾರೆ. ಸಂವಿಧಾನ ವಿರೋಧಿ ಹೆಸರು ಇಟ್ಟುಕೊಂಡಿದ್ದಾರೆ. ಆರ್ಟಿಕಲ್ 1 ಪ್ರಕಾರ ಈ ರೀತಿಯ ಯಾವುದೇ ಹೆಸರು ಅಥವಾ ಆಂಬ್ಲಂ ಇಡುವಂತಿಲ್ಲ. ದ ಆಂಬ್ಲಂಮ್ಸ್ ಅಂಡ್ ನೇಮ್ಸ್ ಪ್ರಿವೆಂಷನ್ ಆಫ್ ಇಂಪ್ರಾಪರ್ ಯೂಸ್ ಆಕ್ಟ್ ಪ್ರಕಾರ ಇದು ತಪ್ಪು. ಇಂಡಿಯಾ ಎನ್ನುವ ಹೆಸರನ್ನು ಯಾವುದೇ ಪಾರ್ಟಿ ಸಂಘಟನೆ ಸಂಸ್ಥೆಗೆ ಇಡುವಂತಿಲ್ಲ ಎಂದರು.

60 ವರ್ಷ ದೇಶ ಆಳಿದವರು ಬೇರೆ ಯಾವುದೇ ಹೆಸರಿಟ್ಟರೆ ಜನ ಬೆಲೆ ಕೊಡುವುದಿಲ್ಲ. ಈ ಕಾರಣಕ್ಕೆ ಇಂಡಿಯಾ ಎಂಬ ಹೆಸರಿಟ್ಟಿದ್ದಾರೆ. ಇದು ಎನ್‌ಡಿಎ ವರ್ಸಸ್ ಇಂಡಿಯಾ ಅಲ್ಲ, ಇದು ಭಾರತ ವರ್ಸಸ್ ಇಂಡಿಯಾ. ಭಾರತದಲ್ಲಿ ಈಗ ಹೊಸ ಕಂಪನಿ ಆರಂಭವಾಗಿದೆ. ವೆಸ್ಟ್ ಇಂಡಿಯಾ ಕಂಪನಿಯನ್ನು ದೇಶವಾಸಿಗಳು ಓಡಿಸಿದ್ದರು. 2024ರಲ್ಲಿ ಮತ್ತೊಮ್ಮೆ ದೇಶದ ಗರಿಮೆಯನ್ನು ಎತ್ತಿ ಹಿಡಿಯುತ್ತಾರೆ. ಈ ಈಸ್ಟ್ ಇಂಡಿಯಾ ಕಂಪೆನಿಗೆ ನರೇಂದ್ರ ಮೋದಿಯೇ ಟಾರ್ಗೆಟ್ ಆಗಿದ್ದಾರೆ. ಭಾರತದ ಜನ ನರೇಂದ್ರ ಮೋದಿಗೆ ಬೆಂಬಲ ನೀಡುತ್ತಾರೆ ಎಂದು ಅವರು ತಿಳಿಸಿದರು.

ಅಜಿತ್ ಪವರ್ ಎನ್‌ಡಿಎ ಸೇರ್ಪಡೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಅಜಿತ್ ಪವಾರ್ ಅವರಿಗೆ ಸೇರಿದ ವಿಚಾರವಾಗಿದೆ. ಕುಟುಂಬ ರಾಜಕಾರಣದಿಂದ ಬೇಸತ್ತು ಎನ್ಡಿಎ ಸೇರಿದ್ದಾರೆ. ಅಜಿತ್ ಪವಾರ್ ಅವರೇ ಎನ್ಸಿಪಿ ನಾಯಕ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಎನ್ಸಿಪಿ ಅಧ್ಯಕ್ಷನ ಚುನಾವಣೆಯಲ್ಲಿ ಅಜಿತ್ ಪವಾರ್ರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕುಟುಂಬ ರಾಜಕಾರಣದಿಂದ ಬೇಸತ್ತು ಅವರು ಆಚೆ ಬಂದಿರಬಹುದು. ಅಜಿತ್ ಪವಾರ್ ಜೊತೆ ಬಿಜೆಪಿ ಗಟ್ಟಿಯಾಗಿ ನಿಲ್ಲುತ್ತದೆ. ದೇಶವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ಅವರು ಜೋಡಣೆಯಾಗಿದ್ದಾರೆ ಎಂದರು.


ರಾಜ್ಯದಲ್ಲಿ ಗ್ಯಾರಂಟಿ ಜಾರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೂರು ನಾಲ್ಕು ತಿಂಗಳಲ್ಲಿ ಕೆಎಸ್ಆರ್ಟಿಸಿ ನಿಗಮ ಸ್ಥಗಿತ ಕೊಳ್ಳುವ ಆತಂಕ ಇದೆ. ಕೆಎಸ್ಆರ್ಟಿಸಿಗೆ ಬಜೆಟ್ ನಲ್ಲಿ ಯಾವುದೇ ವಿಶೇಷ ಅನುದಾನ ಕೊಟ್ಟಿಲ್ಲ. 200 ಯೂನಿಟ್ ಉಚಿತ ವಿದ್ಯುತ್ ಇವತ್ತಿನ ತನಕ ಕಾರ್ಯರೂಪಕ್ಕೆ ಬಂದಿಲ್ಲ. ಭಾಗ್ಯಲಕ್ಷ್ಮಿ ಮತ್ತು ನಿರುದ್ಯೋಗಿ ಭತ್ತೆ, ಮುಂದೂಡುತ್ತಿದ್ದಾರೆ. ನೋಂದಣಿ ಪ್ರಕ್ರಿಯೆ ನಡೆಯುತ್ತಿರಬಹುದು. ಆದರೆ ಬಜೆಟ್ನಲ್ಲಿ ಎಷ್ಟು ಅನುದಾನ ಇಟ್ಟಿದ್ದೀರಿ. ಮೊದಲ ಕ್ಯಾಬಿನೆಟ್ನಲ್ಲಿ ಎಲ್ಲವನ್ನು ಘೋಷಿಸುತ್ತೇನೆ ಎಂದು ಹೇಳಿದ್ದೀರಿ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ಕೇಳುತ್ತೇನೆ ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ? ಎಂದು ಪ್ರಶ್ನಿಸಿದರು.

5 ಕೊಡುಗೆಗಳು ಯಾವಾಗ ಜನರಿಗೆ ನೀಡುತ್ತಿರಿ. ಬೇಗನೆ ಘೋಷಣೆ ಮಾಡಿ. ಭರವಸೆಗಳನ್ನು ಕೊಟ್ಟು ಓಟು ತೆಗೆದುಕೊಂಡಿದ್ದೀರಿ. ರಾಜ್ಯದಲ್ಲಿ ಎಲ್ಲಾ ಗ್ಯಾರೆಂಟಿ ವಿಚಾರದಲ್ಲಿ ಗೊಂದಲ ಕಾಡುತ್ತಿದೆ. ಕೇಂದ್ರ ಸರ್ಕಾರ ಕರೆದಿರುವ ಟೆಂಡರ್ ನಲ್ಲಿ ಬಿಡ್ ಮಾಡುತ್ತಿಲ್ಲ. ಮೋದಿಯನ್ನು ದೂರುವ ಚಾಳಿ ಮಾತ್ರ ಮುಂದುವರೆಸಿದ್ದೀರಿ. ಗ್ಯಾರೆಂಟಿ ಜಾರಿಯಾದ ನಂತರ ಸಂಬಂಧಪಟ್ಟ ಇಲಾಖೆಯ ನಷ್ಟ ಹೇಗೆ ತುಂಬುತ್ತೀರಿ ಹೇಳಿ ಎಂದು ಅವರು ಪ್ರಶ್ನಿಸಿದ್ದಾ

Latest Indian news

Popular Stories