ಕಾರ್ಕಳ: ಪ್ರಚೋದನಕಾರಿ ಭಾಷಣ: ಭಜರಂಗದಳದ ಪುನೀತ್ ಅತ್ತಾವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು

ಉಡುಪಿ: ಭಜರಂಗದಳದ ಮಂಗಳೂರು ವಿಭಾಗೀಯ ಸಹ ಸಂಯೋಜಕ ಪುನೀತ್ ಅತ್ತಾವರ ಮತ್ತು ಕಾರ್ಕಳ ನಗರ ಭಜರಂಗದಳ ಸಂಚಾಲಕ ಸಂಪತ್ ವಿರುದ್ಧ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾನುವಾರ ಕಾರ್ಕಳದಲ್ಲಿ ಭಜರಂಗದಳದ ವತಿಯಿಂದ
ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನದ
ರ್ಯಾಲಿಯಲ್ಲಿ ಪುನೀತ್ ಅತ್ತಾವರ ಭಾಗಿಯಾಗಿದ್ದರು.
ರ್ಯಾಲಿಯ ಬಳಿಕ ಆಯೋಜಿಸಲಾಗಿದ್ದ ಸಭೆಯಲ್ಲಿ
ಮಾತನಾಡಿದ ಪುನೀತ್ ಅತ್ತಾವರ, ಗೋ ಹತ್ಯೆ ವಿಚಾರವಾಗಿ ಮಾತನಾಡುತ್ತಾ “ಬ್ಯಾರಿ ಯಾವ ಕೈಯಿಂದ ಗೋ ಮಾತೆಯನ್ನು ಕಡಿಯುತ್ತಾನೋ ಅವನ ದೇಹದಿಂದ ಅದೇ ಕೈಯನ್ನು ಬೇರ್ಪಡಿಸುವ ಸಂಕಲ್ಪ ತೊಡಬೇಕು ” ಎನ್ನುವ ಹೇಳಿಕೆ ನೀಡಿದ್ದರು.

ಈ ರೀತಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ
ಪುನೀತ್ ಅತ್ತಾವರ ಮತ್ತು ಕಾರ್ಯಕ್ರಮ ಸಂಯೋಜನೆ
ಮಾಡಿದ ಕಾರ್ಕಳ ಭಜರಂಗದಳದ ಸಂಪತ್ ವಿರುದ್ಧ
ಕಾರ್ಕಳ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

Latest Indian news

Popular Stories