ಸಾಂದರ್ಭಿಕ ಚಿತ್ರ
ಉಡುಪಿ: ಸಂತೆ ಕಟ್ಟೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು ಇದೀಗ ನವಮಿ ಬೇಕರಿ ಸಮೀಪದ ಎಟಿಎಮ್ ಲೂಟಲು ಯತ್ನಿಸಿದ್ದಾರೆ.
ಸಂತೆಕಟ್ಟೆ ನವಾಮಿ ಬೇಕರಿ ಬಳಿ ಇರುವ ಕೆನರಾ ಬ್ಯಾಂಕ್ ಎಟಿಎಂ ಐಡಿ ನಂ N0144001 ಜೂನ್ 26ರಂದು ಸಮಯ ಬೆಳಿಗ್ಗೆ 1:21 ಗಂಟೆಗೆ ಕಳ್ಳರು ಆಯುಧದಿಂದ ಎಟಿಎಂ ನ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಎಟಿಎಂ ನಲ್ಲಿದ್ದ ಹಣವನ್ನು ದೋಚಲು ಪ್ರಯತ್ನಪಟ್ಟಿದ್ದಾರೆ.
ನಂತರ ಎಟಿಎಂ ನ OTC ಲಾಕ್ , ಸೆನ್ಸಾರ್ ನ್ನು ಹೊಡೆದುಹಾಕಿ ನಷ್ಟವನ್ನುಂಟು ಮಾಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೆಕಟ್ಟೆಯಲ್ಲಿರುವ ಬ್ಯಾಂಕ್ ಶಾಖೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಬರೆಯಲಾಗಿದ್ದ ಚೆಕ್ ಕಳವು ಮಾಡಿದ ಘಟನೆ ಜೂ.21ರಂದು ಬೆಳಕಿಗೆ ಬಂದಿತ್ತು. ಕಳ್ಳರು ಕಿಟಕಿಯ ಸರಳು ಕತ್ತರಿಸಿ ಒಳ ಪ್ರವೇಶಿಸಿ ಕಚೇರಿಯಲ್ಲಿದ್ದ ಚೆಕ್‌ಅನ್ನು ಕಳವು ಮಾಡಿದ್ದರು. ಸಂತೆಕಟ್ಟೆ ಭಾಗದಲ್ಲಿ ಹಲವಾರು ಅಂಗಡಿ, ಬ್ಯಾಂಕ್‌ಗಳು, ಎಟಿಎಂ, ಹೊಟೇಲ್‌ಗಳು ಸಹಿತ ವ್ಯವಹಾರ ಮಾಡಿಕೊಂಡಿದ್ದು, ಈ ಭಾಗದಲ್ಲಿ ರಾತ್ರಿ ವೇಳೆ ಪೊಲೀಸ್ ವಾಹನ ಇರುತ್ತವೆಯಾದರೂ ಕಳ್ಳತನಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆತಂಕಿತರಾಗಿದ್ದಾರೆ.
ವರ್ಷದ ಹಿಂದೆಯೂ ಇಲ್ಲಿನ ಬೇಕರಿಯೊಂದರಲ್ಲಿ ಕಳ್ಳತನ ಯತ್ನ ನಡೆದಿದ್ದು, ಗ್ಯಾಂಗ್‌ವೊಂದರ ಕೃತ್ಯ ಎಂದು ಶಂಕಿಸಲಾಗಿತ್ತು. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಕಳ್ಳರು ಯಾವ ಭಾಗದಿಂದ ಬಂದು ಎಲ್ಲಿಗೆ ಹೋಗುತ್ತಾರೆ ಎಂಬುದು ಕೂಡ ತಿಳಿಯುತ್ತಿಲ್ಲ. ಕೆಲವು ಅಂಗಡಿಗಳು ಸಿಸಿಟಿವಿ ಅಳವಡಿಕೆ ಮಾಡಿವೆಯಾದರೂ ಅದರ ಕಣ್ತಪ್ಪಿಸಿ ಈ ಕೃತ್ಯ ಎಸಗುತ್ತಿರುವುದು ಪೊಲೀಸರ ತನಿಖೆಗೆ ಹಿನ್ನಡೆಯಾಗುತ್ತಿದೆ. ಆದರೂ ಭಿನ್ನ-ಭಿನ್ನ ಆಯಾಮದಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.