
Udupi
ಹೂಡೆ | ತೋನ್ಸೆ ಫ್ರೆಂಡ್ಸ್ ಕ್ರಿಕೇಟರ್ಸ್ ವತಿಯಿಂದ ಈಶ್ವರ್ ಮಲ್ಪೆಗೆ ಸನ್ಮಾನ | ಉದ್ಯಾನವನ ಉದ್ಘಾಟನೆ
ತೋನ್ಸೆ ಫ್ರೆಂಡ್ಸ್ ಕ್ರಿಕೇಟರ್ಸ್ ಸರಕಾರಿ ಉರ್ದು ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ತೋನ್ಸೆ ಫ್ರೆಂಡ್ಸ್ ಟ್ರೋಫಿ 30 ಗಜಗಳ ಕ್ರಿಕೆಟ್ ಪಂದ್ಯಾಕೂಟ ಉದ್ಘಾಟನಾ ಸಮಾರಂಭ ದಲ್ಲಿ ಭಾಗವಹಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ಹೊಸದಾಗಿ ನಿರ್ಮಿಸಿರುವ ಉದ್ಯಾನವನ ಮತ್ತು ಕ್ರಿಕೆಟ್ ಅಂಕಣವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತೋನ್ಸೆ ಫ್ರೆಂಡ್ಸ್ ವತಿಯಿಂದ ಆಪತ್ಭಾಂಧವ ಈಶ್ವರ್ ಮಲ್ಪೆಯವರ ಸಾಮಾಜಿಕ ಕಳಕಳಿಗಾಗಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಅಫ್ವಾನ್ ಹೂಡೆ, ಶೌಕತ್ ಹೂಡೆ, ಕೆಮ್ಮಣ್ಣು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಫರ್ನಾಂಡೀಸ್, ನಿವೃತ್ತ ಮುಖ್ಯೋಪಾಧ್ಯಾಯರಾದ ಮುಹಮ್ಮದ್ ಹುಸೇನ್, ತೋನ್ಸೆ ಫ್ರೆಂಡ್ಸ್ ಕ್ರಿಕೇಟರ್ಸ್’ನ ಅಬ್ದುಲ್ಲಾ ಹೂಡೆ , ಆಸೀಫ್ ಹೂಡೆ, ಸೈಮ್ ಗ್ರೂಪ್’ನ ನಿರ್ದೇಶಕ ಇಮ್ತಿಯಾಝ್ ಗುಡ್ಮಿ, ಅಲ್ತಾಫ್ ಹೂಡೆ, ನಯಾಝ್, ರಹಮತ್ ಪೆರ್ಲಕಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.




