ಬೈಂದೂರಿನ ಉಪ್ಪುಂದ ಬಳಿ ಸಮುದ್ರದಲ್ಲಿ ನಾಡ ದೋಣಿ ಮಗುಚಿ ಇಬ್ಬರು ಮೀನುಗಾರರು ಮೃತಪಟ್ಟಿದ್ದಾರೆ.
ಆರು ಜನ ಮೀನುಗಾರರು ಈಜಿಕೊಂಡು ದಡ ಸೇರಿದ್ದಾರೆ. ಸ್ಥಳೀಯ ನಿವಾಸಿಗಳದ ನಾಗೇಶ್(30), ಸತೀಶ್(29) ಮೃತಪಟ್ಟ ಮೀನುಗಾರರು ಎಂದು ಹೇಳಲಾಗಿದೆ.
ಸಚಿನ್ ಮಾಲಿಕತ್ವದ ಪಟ್ಟೆಬಲೆ ನಾಡ ದೋಣಿಯಲ್ಲಿ ಮೀನುಗಾರರು ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದಾರೆ.
ಮೀನು ಹಿಡಿದು ದಡಕ್ಕೆ ಬರುವ ವೇಳೆ ಭಾರಿ ಅಲೆಗಳ ಹೊಡೆತದಿಂದ ದೋಣಿ ಮಗುಚಿದೆ. ಎಲ್ಲರೂ ಅಲೆಗಳಲ್ಲಿ ಕೊಚ್ಚಿ ಹೋಗಿದ್ದು, ಅವರಲ್ಲಿ ಸತೀಶ್ ಸಮುದ್ರ ಪಾಲಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ. ಉಳಿದವರು ನಾಗೇಶ್ ಅವರನ್ನು ಸಮುದ್ರದಿಂದ ರಕ್ಷಿಸಿ ಕರೆತಂದರೂ ಅವರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.