Udupi ಅಪರ ಜಿಲ್ಲಾಧಿಕಾರಿಯಾಗಿ ಮಮತಾ ದೇವಿ ಜಿಎಸ್ ನೇಮಕ

ಉಡುಪಿ: ಉಡುಪಿಯ ಅಪರ ಜಿಲ್ಲಾಧಿಕಾರಿಯಾಗಿದ್ದ ವೀಣಾ ಬಿ.ಎನ್ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ. ಇವರ ಜಾಗಕ್ಕೆ ಮಮತಾ ದೇವಿ ಜಿಎಸ್ ಅವರನ್ನು ನೇಮಕಗೊಳಿಸಲು ಆದೇಶದಲ್ಲಿ ತಿಳಿಸಲಾಗಿದೆ. ವೀಣಾ ಅವರಿಗೆ ಸ್ಥಳ ನಿಗದಿಯಾಗಿಲ್ಲ.

ಮಮತಾ ದೇವಿ ಜಿಎಸ್ ಅವರು ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಇದೇ ವೇಳೆ ಮಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿಯಾಗಿದ್ದ ನವೀನ್ ಜೋಸೆಫ್ ಅವರನ್ನು ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.

Latest Indian news

Popular Stories