ನಗರಸಭಾ ವ್ಯಾಪ್ತಿಯಲ್ಲಿ ಕೃತಕ ವೃತ್ತ ನಿರ್ಮಾಣ : ಸಾರ್ವಜನಿಕರ ಆಕ್ಷೇಪ

ಉಡುಪಿ : ನಾಯಿ ಕೊಡೆಯ ರೀತಿಯಲ್ಲಿ ಕೃತಕ ವೃತ್ತ ನಿರ್ಮಾಣವಾಗಿರುವುದು ನಗರ ಸಭಾ ವ್ಯಾಪ್ತಿಯಲ್ಲಿ ಕಂಡು ಬಂದಿದೆ.

ಈಗಾಗಲೇ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆ ಜಾಸ್ತಿಯಾಗಿರುವುದು ಕಂಡು ಬರುತ್ತದೆ.

ಅಪಘಾತ ನಡೆಯುವಂತ ಸ್ಥಳ ದಲ್ಲಿ ಇಂತಹ ಕೃತಕ ವೃತ್ತ ನಿರ್ಮಾಣ ಮಾಡಬೇಕಾಗಿತ್ತು. ಎಲ್ಲಿ ಕೃತಕ ವೃತ್ತವನ್ನು ನಿರ್ಮಾಣ ಮಾಡಬೇಕಿತ್ತೋ ಅಲ್ಲಿ ಹಾಕದೆ ಅವಶ್ಯಕತೆ ಇಲ್ಲದಂತ ಜಾಗದಲ್ಲಿ ನಿರ್ಮಾಣ ಮಾಡಿದ್ದಾರೆ.

ಪ್ರಸ್ತುತ ಹಾಕಿರುವ ವೃತ್ತದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗುತ್ತದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆ ಪ್ರಯುಕ್ತ ನಗರ ಸಬೆ, ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಈ ಕೃತಕ ವೃತ್ತವನ್ನು ತೆರವುಗೊಳಿಸಬೇಕು.

ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Latest Indian news

Popular Stories