ಉಡುಪಿ: ಮದುವೆಗೆಂದು ಬಂದ ವ್ಯಕ್ತಿ ನಾಪತ್ತೆ


ಉಡುಪಿ: ಮಂಗಳೂರು ಒಜಿಲಕೇರಿಯ ನಿವಾಸಿ ರಾಧಾಕೃಷ್ಣ ಸಾಮಗ (50) ಎಂಬ ವ್ಯಕ್ತಿಯು ಮೇ 1 ರಂದು ಕಡೇಕಾರು ಗ್ರಾಮದ ಕನ್ನರಪಾಡಿಯಲ್ಲಿ ಸಂಬಂಧಿಕರ ಮದುವೆಗೆಂದು ಹೋದವರು ವಾಪಸು ಬಾರದೇ ನಾಪತ್ತೆಯಾಗಿರುತ್ತಾರೆ.


5 ಅಡಿ 2 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ದೂ.ಸಂ: 0820-2537999, ಪಿಎಸ್‌ಐ ಮೊ.ನಂ:9480805447 ಅಥವಾ ಉಡುಪಿ ವೃತ್ತ ನಿರೀಕ್ಷಕರ ಮೊ.ನಂ: 9480805430 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ

Latest Indian news

Popular Stories