ಅಪಘಾತ ವಲಯವಾಗಿ ಮಾರ್ಪಡಿಸಿದ ಸಿಗ್ನಲ್ ಕಂಬಗಳು| ಪ್ರತಿಫಲನ ಪಟ್ಟಿ ಅಂಟಿಸಿದ ಸಾಮಾಜಿಕ ಕಾರ್ಯಕರ್ತರು

ಉಡುಪಿ; ನಗರದ ಹಳೆ ಡಯಾನ ವೃತ್ತ ಬಳಿ, ಹಾದುಹೋಗುವ ಪಾದಚಾರಿ ರಸ್ತೆಯ ಮೇಲೆ ಸಿಗ್ನಲ್ ಕಂಬಗಳು ಮತ್ತು ಅದರ ಜೋಡಣಾ ಪರಿಕರಗಳನ್ನು ಕೆಲವು ತಿಂಗಳುಗಳಿಂದ ದಾಸ್ತಾನು ಮಾಡಿಡಲಾಗಿದ್ದು. ಈ ಸೂಕ್ಷ್ಮ ಸ್ಥಳವು ಇವಾಗ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

ತಕ್ಷಣ ಜಿಲ್ಲಾಡಳಿತವು ಇಲ್ಲಿ ದಾಸ್ತಾನಿಟ್ಟಿರುವ ಪರಿಕರಗಳನ್ನು ತೆರವುಗೊಳಿಸಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ. ಇಲ್ಲಿ ಅವಘಡ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ರಸ್ತೆಯಲ್ಲಿ ಮಲಗಿಸಿರುವ ಕಂಬಗಳಿಗೆ (ರಿಪ್ಲಕ್ಟರ್ ಸ್ಟಿಕರ್) ಪ್ರತಿಫಲನ ಪಟ್ಟಿ ಅಂಟಿಸಿ ಸಮಾಜಿಕಪ್ರಜ್ಞೆ ತೋರಿದ್ದಾರೆ.

ಸಾಮಾಜಿಕ ಕಾರ್ಯಕರ್ತರ ಕಳಕಳಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಉಡುಪಿಯ ಪರ್ಯಾಯಯೋತ್ಸವ ಕಾರ್ಯಕ್ರಮ ಸಿದ್ಧತೆಗಳು ನಡೆಯುತ್ತಿದೆ. ಪರ್ಯಾಯ ಮೆರವಣಿಗೆ ಈ ರಸ್ತೆಯ ಮೂಲಕ ಹಾದುಹೋಗುತ್ತದೆ. ಲಕ್ಷಾಂತರ ಭಕ್ತರು ಉಡುಪಿಗೆ ಬರುವ ನಿರೀಕ್ಷೆ ಇದೆ. ಆವಾಗ ಸಿಗ್ನಲ್ ಖಂಬಗಳ ಪರಿಕರಗಳಿಂದಾಗಿ ಭಕ್ತರ ಸಂಚಾರಕ್ಕೆ ತೊಂದರೆಯಾಖುದಲ್ಲದೆ, ಸಮಸ್ಯೆ ಮತ್ತಷ್ಟು ಉಲ್ಭಣವಾಗುವ ಸಾಧ್ಯತೆ ಇದೆ.

ನಗರದಲ್ಲಿ ವಾಹನ ದಟ್ಟಣೆ ಹೆಚ್ಚಳ ಕಂಡಿದ್ದು, ಸುಗಮ ಸಂಚಾರ ವ್ಯವಸ್ಥೆಗಾಗಿ ಸಿಗ್ನಲ್ ಕಂಬ ಅಳವಡಿಸುವ ಯೋಜನೆ ರೂಪಿಸಲಾಗಿತ್ತು. ಅದಕ್ಕೆಂದೆ ನಿರ್ಮಾಣ ಕಾಮಗಾರಿಯು ಪ್ರಾರಂಭ ಪಡೆದಿತ್ತು. ನಗರದ ತ್ರಿವೇಣಿ ವೃತ್ತ, ಹಳೆ ಡಯಾನ ವೃತ್ತದಲ್ಲಿ ಸಿಗ್ನಲ್ ಕಂಬದ ತಳಪಾಯ ಕಾಮಗಾರಿ ಮುಗಿದಿತ್ತು. ಆದರೆ ತಳಪಾಯದ ಪೀಠಕ್ಕೆ ಕಂಬ ಜೋಡಿಸುವ ಕಾಮಗಾರಿಯು ಸ್ಥಗಿತ ಪಡೆದು ಮೂರು ತಿಂಗಳು ಕಳೆದಿವೆ.

ಜೋಡಣೆಗೆ ತಂದಿರುವ ಲಾರಿಗಟ್ಟಲೆ ಸಾಮಾಗ್ರಿಗಳನ್ನು ಪಾದಚಾರಿ ರಸ್ತೆಯಲ್ಲಿ ಸಂಗ್ರಹಿಸಿಡಲಾಗಿದೆ. ಪಾದಚಾರಿಗಳು ನಡೆದಾಡಲು ಸ್ಥಳಾವಕಾಶ ಇಲ್ಲದೆ ವಾಹನ ದಟ್ಟನೆ ಇರುವ ಹೆದ್ದಾರಿಯಲ್ಲಿ ನಡೆದಾಡ ಬೇಕಾದ ಪರಿಸ್ಥಿತಿ ಎದುರಾಗಿದೆ. ಅದೇ ಸ್ಥಳದಲ್ಲಿ ಗಿಡಗಂಟಿಗಳು ಬೆಳೆದು ಪೊದೆಗಳಾಗಿವೆ. ವಿಷ ಜಂತುಗಳಿಗೆ ಆಶ್ರಯತಾಣವಾಗಿದೆ. ಇಲ್ಲಿಯೇ ಕಸ ತ್ಯಾಜ್ಯಗಳು ಸಂಗ್ರಹ ಪಡೆದು ನಾರುತ್ತಿವೆ. ಡಯಾನ ವೃತ್ತದಲ್ಲಿ ರಸ್ತೆಯು ತಿರುವು ಪಡೆದಿರುವುದರಿಂದ ಇಲ್ಲಿ ಬಹಳಷ್ಟು ದ್ವಿಚಕ್ರ ವಾಹನ ಸವಾರರಿಗೆ ಕಂಬಗಳು ಗೋಚರಕ್ಕೆ ಬಾರದೆ ಅಪಘಾತವಾಗಿರುವ ಘಟನೆಗಳು ಬಹಳಷ್ಟು ನಡೆದಿವೆ. ಇಲ್ಲಿ ಎದುರಾಗಿರುವ ಸಮಸ್ಯೆಯನ್ನು ಪರಿಶೀಲಿಸಿ ಜಿಲ್ಲಾಡಳಿತವು ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರು ಆಗ್ರಹಪಡಿಸಿದ್ದಾರೆ.

Latest Indian news

Popular Stories