
ಉಡುಪಿ: ATM ಕಳ್ಳತನ ಯತ್ನ ಪ್ರಕರಣ – ಇಬ್ಬರು ವಶಕ್ಕೆ
ಉಡುಪಿ | ಫೆ.12 ರಂದು ಬೆಳಿಗ್ಗೆ ಸುಮಾರು 2.40 ಗಂಟೆಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಉದ್ಯಾವರ ಗ್ರಾಮದ ಉದ್ಯಾವರ ಕೆನರಾ ಬ್ಯಾಂಕ್ ATM ನಲ್ಲಿದ್ದ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿಗಳ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2025 ಕಲಂ 331(4), 305, 62 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಆರೋಪಿಗಳ ಪತ್ತೆ ಬಗ್ಗೆ ಕಾಪು ವೃತ್ತ ನಿರೀಕ್ಷಕಿಯಾದ ಜಯಶ್ರೀ ಎಸ್ ಮಾನೆ, ಪಡುಬಿದ್ರಿ ಠಾಣೆಯ ಪಿಎಸ್‌ಐ ರವರಾದ ಅನಿಲ್ ಕುಮಾರ್ ಟಿ ನಾಯ್ಕ್ , ಕಾಪು ಠಾಣೆಯ ಪಿಎಸ್‌ಐ ರಮೇಶ್ ನಾಯ್ಕ್, ಹಾಗೂ ಕಾಪು ಠಾಣೆಯ ಸಿಬ್ಬಂದಿಯವರಾದ ಮೋಹನಚಂದ್ರ, ಬಸವರಾಜ, ಗುರುಪಾದಯ್ಯ, ಪ್ರಸಾದ್, ಪಡುಬಿದ್ರಿ ಠಾಣೆಯ ಎ ಎಸ್ ಐ ರಾಜೇಶ್, ಸಿಬ್ಬಂದಿಯವರಾದ ಸಂದೇಶ, ಶಿರ್ವ ಠಾಣೆ ಸಿಬ್ಬಂದಿಯರಾದ ಸಿದ್ದರಾಯ, ಜೀವನ್ ರವರ ತಂಡ ದಿನಾಂಕ: 26/02/2025 ರಂದು ಸಮಯ ಬೆಳಿಗ್ಗೆ 9.30 ಗಂಟೆಗೆ ಮಂಗಳೂರಿನ ಬಂದರನಲ್ಲಿ ಆರೋಪಿತರುಗಳಾದ 1) ಅಬೂಬಕ್ಕರ್ ಸಿದ್ದಿಕ್(24) ತಂದೆ: ಮೊಹಮ್ಮದ್ ಬಾವಾ, ಅಸೈಗೋಳಿ, ಮಂಜನಾಡಿ, ಮಂಗಳೂರು.
2) ಮೊಹಮ್ಮದ್ ಯಾಸೀನ್(21), ತಂದೆ: ಮೊಹಮ್ಮದ್ ಆಸೀಫ್, ಪಡೀಲ್, ಕಣ್ಣೂರು, ಮಂಗಳೂರುರವರನ್ನು ದಸ್ತಗಿರಿ ಮಾಡಿ ಅವರಿಂದ ಕೃತ್ಯಕ್ಕೆ ಬಳಸಿರುವ KA-19-HQ-7717 ನಂಬ್ರದ ಸ್ಕೂಟಿ, ಜಾಕೆಟ್-1, ಹೆಲ್ಮೆಟ್-1, ಕ್ಯಾಪ್-1, ಹ್ಯಾಂಡ್ ಗ್ಲೌಸ್-1ಜೊತೆ, ಕತ್ತಿ-1, ಹ್ಯಾಮರ್- 1 ಹಾಗೂ ಬ್ಯಾಗ್ -1 ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.




