ಉಡುಪಿ: ನೆರೆಗೆ ಕೊಚ್ಚಿಕೊಂಡು ಹೋದ ಕಾರು ; ನಾಲ್ವರು ಪಾರು

ಉಡುಪಿ: ಉಡುಪಿ ಯಲ್ಲಿ ಮುಂದುವರಿದ ಮಳೆಯಿಂದಾಗಿ ಜನ ಜೀವ ಅಸ್ತವ್ಯಸ್ತವಾಗಿದೆ .ನೆರೆಗೆ ಕೊಚ್ಚಿಕೊಂಡು ಕಾರೊಂದು ಕೊಚ್ಚಿ ಹೋಗಿದೆ.

ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಡುಪಿಯ ಕನ್ನರ್ಪಾಡಿ-ಕಡೆಕ್ಕಾರು ಸಂಪರ್ಕದ ರಸ್ತೆಯು ಮಳೆಗೆ ಸಂಪೂರ್ಣ ಜಲಾವೃತಗೊಂಡಿತ್ತು. ಜಲಾವೃತ ವಾದ ರಸ್ತೆಯಲ್ಲೇ ಕಾರು ಚಲಾಯಿಸಿದ್ದರು.‌ನೀರಿನ ಹರಿವಿನ ರಭಸಕ್ಕೆ ನೀರಿನಲ್ಲಿ ಕಾರು ಕೊಚ್ಚಿ ಹೋಗಿದೆ.

ಕಾರಿನಿಂದ ಹೊರಗೆ ಹಾರಿ ನಾಲ್ವರು ಪ್ರಾಣಪಾಯದಿಂದ ಪಾರಾಗಿದ್ದಾರೆ‌. ಗದ್ದೆಯಲ್ಲಿ ಸಿಲುಕಿಕೊಂಡ ಕಾರನ್ನು ಅಗ್ನಿ ಶಾಮಕ ದಳ ಮತ್ತು ಸ್ಥಳೀಯರು ರಕ್ಷಿಸಿದ್ದಾರೆ.

IMG 20240708 WA0160 Udupi IMG 20240708 WA0161 Udupi IMG 20240708 WA0159 1 Udupi IMG 20240708 WA0158 Udupi

Latest Indian news

Popular Stories