Udupi

ಉಡುಪಿ: ಎರಡು ಖಾಸಗಿ ಬಸ್ ಚಾಲಕರ ಮೇಲೆ ಪ್ರಕರಣ ದಾಖಲು

ಉಡುಪಿ: ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಬಸ್ಸನ್ನು ಚಲಾಯಿಸಿದ ಆರೋಪದಡಿಯಲ್ಲಿ ಇಬ್ಬರು ಚಾಲಕರ ಮೇಲೆ ಪ್ರಕರಣ ದಾಖಲಾಗಿದೆ.

ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿ-66 ನೇ ಬಳಿ ಇರುವ ಕಾರ್ ಕ್ಯಾರ್ ಸರ್ವಿಸ್ ಸೆಂಟರ್ ಸ್ವಲ್ಪ ಮುಂದೆ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ಮಾಡುತ್ತಿರುವ ಸಮಯ ಬೆಳಿಗ್ಗೆ ಕಿನ್ನಿಮುಲ್ಕಿ ಸ್ವಾಗತ ಗೋಫುರದ ಕಡೆಯಿಂದ ಬಲಾಯಿಪಾದೆ ಕಡೆಗೆ ಆರೋಪಿ ಆಶ್ರಿತ್ ಎಂಬುವವರು ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ‌.

ಇನ್ನೊಂದು ಪ್ರಕರಣದಲ್ಲಿ ನಿಟ್ಟೂರು ಕಡೆಯಿಂದ ಕರಾವಳಿ ಕಡೆಗೆ ಹೋಗುತ್ತಿದ್ದಾಗ ಚಾಲಕ ರಜತ್ ಎಂಬುವವರು ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ ಆರೋಪ ಮಾಡಲಾಗಿದೆ.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2024, ಕಲಂ: 281 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button