Udupi

ಉಡುಪಿ ಅಟೋ ಚಾಲಕರ ಮೇಲೆ ದೌರ್ಜನ್ಯ, ಹಲ್ಲೆ__ಸಿಐಟಿಯು ಖಂಡನೆ

ಉಡುಪಿ ನಗರದ ಪ್ರತಿಷ್ಠಿತ ಜಯಲಕ್ಷ್ಮಿ ಬಟ್ಟೆ ಅಂಗಡಿ ಮಾಲಕರು ಹಾಗೂ ಸಿಬ್ಬಂದಿ ಸಾರ್ವಜನಿಕ ರಸ್ತೆಯಲ್ಲಿ ಬಾಡಿಗೆ ನಿರತರಾಗಿದ್ದ ರಿಕ್ಷಾ ಚಾಲಕನಿಗೆ ದೈಹಿಕ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಇದನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ CITU (ಕಾರ್ಮಿಕ ಸಂಘಟನೆ )ಉಡುಪಿ ವಲಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ಸಾರ್ವಜನಿಕ ರಸ್ತೆಯಲ್ಲಿ ಅಂಗಡಿ, ಮಾರುಕಟ್ಟೆ ಬಳಿ ರಿಕ್ಷಾ ಚಾಲಕರು ನಿಧಾನವಾಗಿ ಚಲಿಸುವುದು ಸಾಮಾನ್ಯ ಅದರೆ ಜಯಲಕ್ಷ್ಮಿ ಬಟ್ಟೆ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಗಳು ಅದನ್ನು ನೆಪವಾಗಿ ಇಟ್ಟು ಕೊಂಡು ಬಡಾ ರಿಕ್ಷಾ ಚಾಲಕರ ಮೇಲೆ ದೌರ್ಜನ್ಯ ನಡೆಸುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲದೆ ರಿಕ್ಷಾದ ಮುಂದೆ ಹಾಗೂ ಹಿಂದೆ ಮಾಲೀಕರು ವಾಹನ ಮತ್ತು ಟಂಪೋ ವನ್ನು ಅಡ್ಡ ಇಟ್ಟು 3ಗಂಟೆಗಳ ಕಾಲ ಸತಾಯಿಸಿದ್ದು ರಿಕ್ಷಾದ ಕೀ ಯನ್ನು ಕಸಿದು ಕೊಂಡಿರುತ್ತಾರೆ ತನ್ನ ಹೊಟ್ಟೆ ಪಾಡಿಗಾಗಿ ದಿನಕ್ಕೆ 600 ರಿಂದ 800ರೂ ದುಡಿದು ತನ್ನ ಜೀವನ ಸಾಗಿಸುವ ರಿಕ್ಷಾ ಚಾಲಕರ ಮೇಲೆ ಹಲ್ಲೆ ನಡೆಸಿದ ಮಾಲೀಕರು ಹಾಗೂ ಸಿಬ್ಬಂದಿ ಮೇಲೆ ಕೇಸು ದಾಖಲಿಸಬೇಕು ಉಡುಪಿ ನಗರ ಠಾಣೆ ಹಾಗೂ ಟ್ರಾಫಿಕ್ ಪೋಲಿಸ ರು ನಿನ್ನೆ ನಡೆದ ಘಟನೆಯಲ್ಲಿ ಅಂಗಡಿ ಮಾಲಿಕರ ಪರವಾಗಿ ಕೆಲಸ ಮಾಡಿದ್ದು ಕಂಡು ಬಂದಿದ್ದು ಈ ಕೂಡಲೇ ಉಡುಪಿ ಪೋಲಿಸ್ ವರಿಷ್ಠಾಧಿಕಾರಿಯವರು ಮಧ್ಯ ಪ್ರವೇಶಿಸಿ ಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ನೋಡಬೇಕೆಂದು ಉಡುಪಿ ವಲಯ ಸಿಐಟಿಯು ಸಂಚಾಲಕರಾದ ಕವಿರಾಜ್. ಎಸ್ ತಮ್ಮಲ್ಲಿ ಮನವಿ ಮಾಡಿ ಕೊಳ್ಳುತ್ತೆನೆ.

ಅಷ್ಟೇ ಅಲ್ಲದೆ ಈಗಾಗಲೇ ಜಯಲಕ್ಷ್ಮಿ ಬಟ್ಟೆ ಅಂಗಡಿ ಮುಂದೆ ರಾಜ್ಯ ರಸ್ತೆ ಪ್ರಾಧಿಕಾರದ ಜಾಗ ಇದ್ದು ಅದನ್ನು ಬಟ್ಟೆ ಅಂಗಡಿ ಮಾಲಕರು ರಾಜಕೀಯ ವ್ಯಕ್ತಿಗಳ ಹಾಗೂ ಕೆಲವು ಅಧಿಕಾರಿಗಳ ಪ್ರಭಾವದಿಂದ ಜಾಗ ಅಕ್ರಮಣ ಮಾಡಿದ್ದು ಈ ಕೂಡಲೇ ನಗರಸಭೆಯ ಪೌರಾಯುಕ್ತರು ಈ ಆಕ್ರಮಣ ಜಾಗ ವಶಪಡಿಸಿ ಕೊಳ್ಳಬೇಕು ಇಲ್ಲದಿದ್ದಲ್ಲಿ ಮುಂದಿನ ದಿನ ಸಾರ್ವಜನಿಕರು ,ಕಾರ್ಮಿಕರು, ರಿಕ್ಷಾ ಚಾಲಕರು ಒಟ್ಟು ಸೇರಿ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button