ಉಡುಪಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯ ಮಂತ್ರಿ ಡಿ. ದೇವರಾಜ್ ಅರಸ್ ಅವರ ಜನ್ಮ ದಿನಾಚರಣೆ

ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಗಾಂಧಿ ಸಂಘಟನೆ ಇದರ ಆಶ್ರಯದಲ್ಲಿ ಓಸ್ಕರ್ ಸ್ಮಾರಕ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯ ಮಂತ್ರಿ ಡಿ. ದೇವರಾಜ್ ಅರಸ್ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.

IMG 20230823 WA0004 Udupi

ವಂದೇ ಮಾತರಂ ಗೀತೆಯೊಂದು ಕಾರ್ಯಕ್ರಮ ಆರಂಭವಾಗಿ ಹಿರಿಯ ಕಾಂಗ್ರೆಸ್ಸಿಗರಾದ ಬಿ. ನರಸಿಂಹ ಮೂರ್ತಿ ಮತ್ತು ಫಾದರ್ ವಿಲಿಯಂ ಮಾರ್ಟಿಸ್ ನಾಯಕರ ಭಾವಚಿತ್ರದ ಎದುರು ದೀಪ ಬೆಳಗಿಸಿದರು. ನಂತರ ಮಾತನಾಡಿದ ಬಿ. ನರಸಿಂಹ ಮೂರ್ತಿಯವರು ರಾಜೀವ್ ಗಾಂಧಿ ಹಾಗೂ ಡಿ. ದೇವರಾಜ ಅರಸ್ ರವರ ಜೀವನ ಚರಿತ್ರೆ ,ಸಾಧನೆ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಹರೀಶ್ ಕಿಣಿಯವರು ಮಾಹಿತಿ ತಂತ್ರಜ್ಞಾನ ಮತ್ತು ಇಂಟರ್ನೆಟ್ ವ್ಯವಸ್ಥೆಯಲ್ಲಿ ಕ್ರಾಂತಿ ತಂದು ಭವ್ಯ ಭಾರತ ನಿರ್ಮಾಣವನ್ನು ಸಾಕರಗೊಳಿಸಿದ ರಾಜೀವ್ ಗಾಂಧಿ ಹಾಗೂ ಉಳುವವನೇ ಭೂ ಒಡೆಯ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿದ ದೇವರಾಜ ಅರಸು ಇವರು ಮಹಾ ಚೇತನರು ಎಂದರು.
ಇಂದು ವ್ಯಾಪಕವಾದ ಸುದ್ದಿಗಳನ್ನು ಹರಡುವ ಬಿಜೆಪಿ ಸುಳ್ಳಿನ ಮೇಲೆಯೇ ದೇಶವನ್ನಾಳಲು ಹೊರಟಿದೆ.ಈ ಸುಳ್ಳುಗಳ ಮುಂದೆ ನಾವು ನಮ್ಮ ನಾಯಕರುಗಳಾದ ರಾಜೀವ್ ಗಾಂಧಿ,ದೇವರಾಜ್ ಅರಸು ಮಂತಾದವರ ಸಾಧನೆಗಳನ್ನು ಇರಿಸಿ ಸುಳ್ಳು ಪಡೆಯನ್ನು ನಿಶಸ್ತ್ರಿಕರಿಸೋಣ . ಈಮೂಲಕ ಭವ್ಯ ಭವಿಷ್ಯದ ಭಾರತ ಕಟ್ಟೋಣ ಎಂದು ಉದ್ಯಾವರ ನಾಗೇಶ್ ಕುಮಾರ್ ಹೇಳಿದರು.


ದೇಶದ ಎಲ್ಲಾ ರಂಗಗಳಲ್ಲೂ ಯುವ ಸಮೂಹದ ಭವಿಷ್ಯ ರೂಪಿಸುವಲ್ಲಿ ರಾಜೀವ್ ಗಾಂಧಿಯವರ ಕೊಡುಗೆ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ತಂದು ಭೂ ಮಸೂದೆ ಕಾನೂನು ಜಾರಿಗೊಳಿಸುವ ಮೂಲಕ ಕ್ರಾಂತಿ ಮಾಡಿದ ಡಿ ದೇವರಾಜ್ ಅರಸುರವರನ್ನು ಮುಖಂಡರಾದ ಪ್ರಸಾದ್ ಕಾಂಚನ್ ರವರು ನೆನೆಸಿಕೊಂಡರು.


ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಮೃತಾ ಪೂಜಾರಿ ಇವರು ಅಲೆವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರನ್ನು ಜಿಲ್ಲಾ ಸಮಿತಿಯಿಂದ ಗೌರವಿಸಲಾಯಿತು.


ರಾಜ್ಯ ಸಹ ಸಂಚಾಲಕಿ ರೋಶಿನಿ ವಲಿವರ್, ಗೌರವ ಸಲಹೆಗಾರರು ವೆರೋನಿಕ ಕರ್ನೇಲಿಯೋ, ಜಿಲ್ಲಾ ಉಸ್ತುವಾರಿ ಡಾ.ಸುನೀತಾ ಶೆಟ್ಟಿ, ಕಿಶನ್ ಹೆಗ್ಡೆ ,ರೋಶನ್ ಶೆಟ್ಟಿ,ಕುಶಲ ಶೆಟ್ಟಿ ಕೀರ್ತಿ ಶೆಟ್ಟಿ ಶಶಿಧರ್ ಶೆಟ್ಟಿ, ಶಬರೀಶ್, ಮೇರಿ ಡಿಸೋಜ, ಸೂರ್ಯ ಸಾಲಿಯಾನ್, ಶಂಕರ ನಾಯ್ಕ ,ಮಾರ್ಗರೇಟ್ ಸೀಮಾ, ಶಾಂತಿ ಪಿರೇರಾ,ಸತೀಶ್ ಜಪ್ತಿ,ಜೋಯ್ಸ್ ಟೆನ್ನಿಸ್,ಲಿಲ್ಲಿ ಡಿಸೋಜ, ಉದಯ, ನಜೀರ್,ರೋನಾಲ್ಡ್, ಲಕ್ಷ್ಮಿ ನಾರಾಯಣ, ಕುಮುದ, ವಾರೀಜಾಕ್ಷಿ ಮತ್ತಿತರರು ಭಾಗವಹಿಸಿದರು. ಆನಂದ್ ಪೂಜಾರಿ ಸ್ವಾಗತಿಸಿ,ರೋಶನ್ ಬರಟೋ ವಂದಿಸಿದರು . ಅಮೃತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Latest Indian news

Popular Stories