ಮೊಬೈಲ್ ವೀಡಿಯೋಪ್ರಕರಣ – 3 ವಿದ್ಯಾರ್ಥಿನಿಯರಿಗೆ ಜಾಮೀನು ಮಂಜೂರು

ಉಡುಪಿಯ:ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ
ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ
ನ್ಯಾಯಾಲಯದಲ್ಲಿ ಮೂವರು ವಿದ್ಯಾರ್ಥಿನಿಯರಿಗೆ
ಜಾಮೀನು ಮಂಜೂರಾಗಿದೆ‌

ಶಬನಾಜ್,ಆಲ್ಪಿಯಾ,ಆಲಿಮತುಲ್ ಶಾಫಿಯಾಗೆ
ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ವಿಡಿಯೋ ಮಾಡಿದ ಆರೋಪ ಎದುರಿಸುತ್ತಿದ್ದ
ವಿದ್ಯಾರ್ಥಿನಿಯರ ಮೇಲೆ ಮಲ್ಪೆ ಪೊಲೀಸರು.
ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು.
ಪ್ರಕರಣದ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾದ
ವಿದ್ಯಾರ್ಥಿನಿಯರಿಗೆ ನ್ಯಾಯಾಲಯ ಜಾಮೀನು ನೀಡಿ
ಆದೇಶ ಹೊರಡಿಸಿದೆ.ಆರೋಪಿತ ವಿದ್ಯಾರ್ಥಿಗಳ ಪರ ವಕೀಲರಾದ ಅಸಾದುಲ್ಲಾ ಕಟಪಾಡಿ ವಾದ ಮಂಡಿಸಿದ್ದರು.

Latest Indian news

Popular Stories