Udupi

ಉಡುಪಿ ಕರಾವಳಿ ಹೊಟೇಲ್ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ- ಕೊಲೆ ಶಂಕೆ

ಉಡುಪಿ : ಉಡುಪಿಯ ಕರಾವಳಿ ಹೊಟೇಲಿನ ವಠಾರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೇಲ್ನೋಟಕ್ಕೆ
ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಬೆಳಗ್ಗೆ 9 ಗಂಟೆಗೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ಅಧಿಕಾರಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಕೆಎಂಸಿ ಮಣಿಪಾಲ ಹಾಗೂ ಮಂಗಳೂರಿನ ನ್ಯಾಯ
ವಿಜ್ಞಾನ ಪ್ರಯೋಗಾಲಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ನಡೆಸಿದ್ದಾರೆ. ಹರಿತವಾದ ಆಯುಧದಿಂದ ವ್ಯಕ್ತಿಯ ಬಲ ಕೈ
ಕಡಿದಿದ್ದು ತೀವ್ರ ರಕ್ತಸ್ರಾವವೇ ಸಾವಿಗೆ ಕಾರಣವಿರಬಹುದು
ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಸಮಾಜಸೇವಕ ವಿಶು ಶೆಟ್ಟಿ ಕೆಎಂಸಿ ಶವಾಗಾರದಲ್ಲಿ
ಶವ ಇಡಲು ಪೊಲೀಸರಿಗೆ ಸಹಕರಿಸಿದ್ದಾರೆ. ಸಾಮಾಜಿಕ
ಕಾರ್ಯಕರ್ತ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ
ಹಾಗೂ ರಾಮದಾಸ್ ಪಾಲನ್ ಕಾನೂನು ಪ್ರಕ್ರಿಯೆಗೆ
ಸಹಕರಿಸಿದ್ದಾರೆ. ಸಂಬಂಧಿಕರು ಅಥವಾ ಸಂಬಂಧ
ಪಟ್ಟವರು ಠಾಣೆಗೆ ಸಂಪರ್ಕಿಸುವಂತೆ ವಿನಂತಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button