ಚುನಾವಣೋತ್ತರ ಸಮೀಕ್ಷೆಯ ನಂತರ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು ಬಹುಮತದತ್ತ ಹೆಜ್ಜೆ ಹಾಕಿದೆ. ಈತನ್ಮಧ್ಯೆ ಉಡುಪಿ ಜಿಲ್ಲೆಯ ಐದು ಕ್ಷೇತ್ರದಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದ್ದು ಎರಡು ಕ್ಷೇತ್ರದಲ್ಲಿ ಜಿದ್ದಾ ಜಿದ್ದಿ ಇದ್ದು ಗೆಲುವ ಯಾರ ತೆಕ್ಕೆಗೆ ಬೀಳಲಿದೆ ಎಂಬುವುದು ಅನಿಶ್ಚಿತತೆಯಿಂದ ಕೂಡಿದೆ.
ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಯಿದ್ದು ಗೆಲುವು ಯಾರ ಕಡೆ ತಿರುಗಲಿದೆ ಎಂಬುವುದು ಇನ್ನು ಕೂಡ ಲೆಕ್ಕಕ್ಕೆ ಸಿಗುತ್ತಿಲ್ಲ. ಕಾರ್ಕಳ ಕ್ಷೇತ್ರದಲ್ಲೂ ಸುನೀಲ್ ಕುಮಾರ್ ಮತ್ತು ಮುನಿಯಾಲು ಉದಯ ಕುಮಾರ್ ಶೆಟ್ಟಿ ನಡುವೆ ತೀವ್ರವಾದ ಜಿದ್ದಾ ಜಿದ್ದಿ ಕಂಡು ಬರುತ್ತಿದೆ.
ಇನ್ನು ಕಾಪು, ಬೈಂದೂರು ಮತ್ತು ಕುಂದಾಪುರದಲ್ಲಿ ಇಂದಿನ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಗೆಲುವಿನ ಸಮೀಪದಲ್ಲಿ ಕಂಡು ಬರುತ್ತಿದೆ. ಈ ಮೂಲಕ ಕಳೆದ ಬಾರಿ ಕಳೆದುಕೊಂಡಿದ್ದ ಸ್ಥಾನಗಳನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿದೆ ಕಾಂಗ್ರೆಸ್.
ಮೇ 13 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದ್ದು ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ.