ಉಡುಪಿ, ಡಿ.8: ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರು ಹೃದಯ ಸ್ತಂಭನಗೊಂಡು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಡಾ ಶಶಿಕಲಾ ಎಂದು ಗುರುತಿಸಲಾಗಿದೆ.
ಅವರು ಫೆಬ್ರವರಿ 2022 ರಲ್ಲಿ ನಿವೃತ್ತರಾಗಿದ್ದರು ಆದರೆ ವೈದ್ಯರ ಕೊರತೆಯಿಂದಾಗಿ ಗುತ್ತಿಗೆ ಆಧಾರದ ಮೇಲೆ ಮುಂದುವರೆಯುತ್ತಿದ್ದರು. ಅವರು OPD ಯಲ್ಲಿ ರೋಗಿಗಳನ್ನು ಪರೀಕ್ಷಿಸುತ್ತಿದ್ದರು.
ಗುರುವಾರ ಡಾ.ಶಶಿಕಲಾ ಅವರು ಒಪಿಡಿಯಲ್ಲಿ ರೋಗಿಗಳ ತಪಾಸಣೆ ನಡೆಸುತ್ತಿದ್ದಾಗ ಕುಸಿದು ಬಿದ್ದಿದ್ದರು. ತಕ್ಷಣ ಸಿಬ್ಬಂದಿ ಆಕೆಯನ್ನು ಐಸಿಯುಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ.