ಉಡುಪಿ:ಉಡುಪಿ ಜನಾಸೇವಾ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ನಿ. ಉಡುಪಿ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 23 ರಂದು ಹೂಡೆಯ ಸಾಲಿಹಾತ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಉದ್ಯಾವರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸೊಸೈಟಿಯ ಉಪಾಧ್ಯಕ್ಷರಾದ ಹುಸೇನ್ ಕೋಡಿಬೆಂಗ್ರೆ ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು.
ಸಹಕಾರಿಯ ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿ ಪ್ರಶಾಂತ್ ಮೊಗವೀರ ಅವರು ವರದಿ ಮತ್ತು ಮುಂದಿನ ಸಾಲಿನ ಬಜೆಟ್ ಮಂಡಿಸಿ ಸದಸ್ಯರಿಂದ ಅನುಮೋದನೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಇರ್ಷಾದುಲ್ಲಾ ಆದೀಲ್, ನಿರ್ದೇಶಕರಾದ ಫಾಹೀನಾ, ನಬೀಲ್ ಗುಜ್ಜರ್’ಬೆಟ್ಟು, ಸಮೀನಾ, ಝಕ್ರಿಯಾ, ಹಿರಿಯರಾದ ಎಚ್.ಶಬ್ಬೀರ್ ಸಾಹೇಬ್, ಉರ್ದು ಶಾಲೆ ಹೂಡೆಯ ನಿವೃತ್ತ ಮುಖ್ಯೋಪಾಧ್ಯರಾದ ಮುಹಮ್ಮದ್ ಹುಸೇನ್, ಸಮಾಜ ಸೇವಕ ಟಿ.ಎಸ್ ಅನ್ಸಾರ್, ಗ್ರಾ.ಪಂ ಸದಸ್ಯರಾದ ಇದ್ರಿಸ್ ಹೂಡೆ, ಸಿಬ್ಬಂದಿಗಳಾದ ಝರೀನಾ,ಝುಬೇದಾ ಬಾನು, ಅಕ್ರಮ್ ಹೂಡೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ವಿತ್ತರು.