ಉಡುಪಿ | ಕಾಂಕ್ರೇಟ್ ರಸ್ತೆಯಲ್ಲಿ ಸೊರಿಕೆ; ಕ್ರಮಕ್ಕೆ ಆಗ್ರಹ

ಮಣಿಪಾಲ ಇಂಡಸ್ಟ್ರೀಯಲ್ ಏರಿಯಾದಲ್ಲಿ ತಯಾರಿಸಲ್ಪಡುವ ಕಾಂಕ್ರೀಟ್ ಮಿಶ್ರಣದ ಸಾಗಟವು ನಗರ ಹಾಗೂ ಹೊರ ವಲಯಗಳಿಗೆ ಟ್ಯಾಂಕರ್ ಟ್ರಕ್ಕುಗಳ ಮೂಲಕ ನಡೆಯುತ್ತಿರುತ್ತದೆ. ಕಾಂಕ್ರೀಟ್ ಸಾಗಟದ ಟ್ರಕ್ಕುಗಳು ಸಂಚರಿಸುವ ರಸ್ತೆಯ ಉದ್ದಕ್ಕೂ ಕಾಂಕ್ರೇಟನ್ನು ಚೆಲ್ಲುತ್ತ ಸಾಗುತ್ತಿರುತ್ತವೆ. ಇದರ ಪರಿಣಾಮ ನವೀಕೃತ ರಸ್ತೆಗಳು ಹಾಳಾಗುತ್ತಿವೆ. ರಸ್ತೆಗಳ ಅಂದವು ಕೇಡುತ್ತಿದೆ. ದ್ವಿಚಕ್ರ ವಾಹನ ಸವಾರರು, ಜಾರುವಿಕೆಯಿಂದ ನಿಯಂತ್ರಣ ಸಿಗದೆ, ಬಿದ್ದು ಗಾಯಾಳುಗಳಾಗುವ ಘಟನೆಗಳು ನಡೆಯುತ್ತಿರುತ್ತವೆ. ಕಾಂಕ್ರೀಟ್ ಒಣಗಿದ ಬಳಿಕ, ಧೂಳು ಎದ್ದು ಸಂಚರಿಸಲಾಗದ ಪರಿಸ್ಥಿತಿ ಎದುರಾಗುತ್ತದೆ.

ಜಿಲ್ಲಾಡಳಿತವು ಕಾಂಕ್ರೀಟ್ ಸಾಗಟದ ವಾಹನಗಳಿಂದಾಗುವ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಆಗ್ರಹಪಡಿಸಿದ್ದಾರೆ.

Latest Indian news

Popular Stories