ಉಡುಪಿ: ಆನ್ಲೈನ್ ವಂಚನೆ – ಆರೋಪಿ ಸೆರೆ

ಉಡುಪಿ, ಸೆ.4: ಬ್ಯಾಂಕ್ ಖಾತೆಯ ಹಣವನ್ನು ಆನ್ಲೈನ್ ಮೂಲಕ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಒರಿಸ್ಸಾ ಮೂಲದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಒಡಿಶಾ ರಾಜ್ಯದ ಗಂಜಮ್ ಜಿಲ್ಲೆಯ ಕೊನಪಾಲದ ವಿಶಾಲ್ ಕೋನಪಾಲ(30) ಎಂದು ಗುರುತಿಸಲಾಗಿದೆ. ಈತನಿಂದ 1,56,100ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಬೆಳ್ಮಣ್ ನಿವಾಸಿ ಜಯ ಶೆಟ್ಟಿ ಎಂಬವರ ಮಗ ಪ್ರಶಾಂತ್ ಶೆಟ್ಟಿ ಎಂಬವರು ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಫೆ.10ರಿಂದ 20ರ ಮಧ್ಯಾವಧಿ ಯಲ್ಲಿ ಪ್ರಶಾಂತ್ ಶೆಟ್ಟಿಯ ಗಮನಕ್ಕೆ ಬಾರದೇ ಅಪರಿಚಿತರು ಆನ್ಲೈನ್ ಮೂಲಕ ಇವರ ಎರಡು ಖಾತೆಗಳಿಂದ ಹಂತ ಹಂತವಾಗಿ ಒಟ್ಟು 1,56,100ರೂ. ನಗದನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದ ಎಎಸ್ಐ ಉಮೇಶ್ ಜೋಗಿ ಮತ್ತು ಸಿಬ್ಬಂದಿ ನಿಲೇಶ್ ತಂಡ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ಒರಿಸ್ಸಾ ರಾಜ್ಯದ ಬೈರಂಪುರಕ್ಕೆ ತೆರಳಿ ಬಂಧಿಸಿದೆ ಎಂದು ತಿಳಿದುಬಂದಿದೆ

Latest Indian news

Popular Stories