ಉಡುಪಿ: ಫೇಸ್ ಬುಕ್ ಮೂಲಕ ಪರಿಚಯವಾದ ಮಹಿಳೆಯನ್ನು ನಂಬಿದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಹಿಳೆಯೊಬ್ಬರು 11 ಲಕ್ಷಕ್ಕೂ ಹೆಚ್ಚು ಹಣ ಪಂಗನಾಮ ಹಾಕಿಸಿಕೊಂಡಿದ್ದಾರೆ.
ಕಾರ್ಕಳ ತಾಲೂಕಿನ ಮಿಯಾರಿನ ಕುಂಟಿಬೈಲಿನ 38 ವರ್ಷದ ನಿವಾಸಿಯೊಬ್ಬರಿಗೆ ಫೇಸ್ ಬುಕ್ ಮೂಲಕ ಮಾರ್ಕ್ ಸೀಮಾ ಎಂಬವರು ಪರಿಚಯವಾಗಿದ್ದರು. ಗೆಳೆತನದಲ್ಲಿ ಅವರು ತಮ್ಮ ವಿಳಾಸವನ್ನು ನೀಡಿದ್ದರು. ಅವರ ನಂಬರಿನಿಂದ ಸುನಿತಾ ಕುಮಾರಿ ಎಂಬವರು ಮಹಿಳೆಗೆ ಲಂಡನ್ ನಿಂದ ಚಿನ್ನದ ವಸ್ತು ಮತ್ತು ಪೌಂಡು ಹಣ ಪಾರ್ಸೆಲ್ ಬಂದಿದೆ ಎಂದು ಹೇಳಿ ಅದರ ಕಸ್ಟಮ್ ಚಾರ್ಜ್ ಹಾಗೂ ಐ.ಟಿ ರೈಡ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ.
ಕಾರ್ಕಳದ ಮಹಿಳೆಯು ಹಂತ ಹಂತವಾಗಿ ಗೂಗಲ್‌ಪೇ ಮೂಲಕ ಒಟ್ಟು 11,94,490 ರೂ ಹಣವನ್ನು ವರ್ಗಾವಣೆ ಮಾಡಿದ್ದಾರೆ.ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 60/2024ಕಲಂ: 66 (ಸಿ) (ಡಿ) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.