ಉಡುಪಿ: ಚಿಕಿತ್ಸೆಗಾಗಿ ದಾನಿಗಳಿಂದ ನೆರವಿಗೆ ಮನವಿ

ಉಡುಪಿ, ಮೇ 24: ಮಾರಕ ಕಾಯಿಲೆಯಿಂದ ಬಳಲುತ್ತಿರುವ ಕಟಪಾಡಿ ಸಮೀಪದ ಶಂಕರಪುರ ಸರಕಾರಿಗುಡ್ಡೆ ನಿವಾಸಿ ಹಸನಬ್ಬ ಟಿ.(60) ಚಿಕಿತ್ಸೆಗಾಗಿ ದಾನಿಗಳ ನೆರವನ್ನು ಕೋರಿದ್ದಾರೆ.

ಮೂವರು ಮಕ್ಕಳು ಮತ್ತು ಪತ್ನಿ ಜೊತೆ ವಾಸವಾಗಿರುವ ಇವರು, ಉಡುಪಿ ಜಾಮೀಯ ಮಸೀದಿಯಲ್ಲಿ ಸಿಬ್ಬಂದಿಯಲ್ಲಿ ದುಡಿಯುತ್ತಿದ್ದಾರೆ. ಬಡ ಕುಟುಂಬಕ್ಕೆ ಆಧಾರಸ್ತಂಭವಾಗಿರುವ ಹಸನಬ್ಬ ಇದೀಗ ಮಾರಕ ಕಾಯಿಲೆಗೆ ತುತ್ತಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರ ಚಿಕಿತ್ಸೆಗೆ ಸುಮಾರು 5ಲಕ್ಷ ರೂ.ವರೆಗೆ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದುದರಿಂದ ಇವರಿಗೆ ನೆರವು ನೀಡಲು ಇಚ್ಛಿಸುವ ದಾನಿಗಳು ವಿಳಾಸ: ಸರಕಾರಿಗುಡ್ಡೆ ಹೌಸ್, ಮೂಡಬೆಟ್ಟು, ಶಂಕರಪುರ, ಕಾಪು ತಾಲೂಕು. ಮೊಬೈಲ್ ನಂಬರ್: 9739671942ಕ್ಕೆ ಸಂಪರ್ಕಿಸಬಹುದು. ಕೆನರಾ ಬ್ಯಾಂಕ್ ಶಂಕರಪುರ ಶಾಖೆ, ಖಾತೆ ಸಂಖ್ಯೆ: 0636103011989, ಐಎಫ್‌ಸಿ ಕೋಡ್- ಸಿಎನ್‌ಆರ್‌ಬಿ 0000636

Latest Indian news

Popular Stories