ಉಡುಪಿ: ಸತತ 36 ಗಂಟೆ ಕಾಲ “ಸಾಗರ ಕವಚ” ಅಣಕು ಕಾರ್ಯಾಚರಣೆ

ಉಡುಪಿ: ಇಂಡಿಯನ್ ಕೋಸ್ಟಲ್ ಗಾಡ್೯, ಕರಾವಳಿ ಕಾವಲು ಪೊಲೀಸ್, ಇಂಡಿಯನ್ ನೇವಿ, ಕಸ್ಟಮ್ಸ್, ಮೀನುಗಾರಿಕೆ ಇಲಾಖೆ, ಬಂದರು ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆಯ ಜಂಟಿ ಸಹಯೋಗದಲ್ಲಿ ಸತತ 36 ಗಂಟೆ ಕಾಲ “ಸಾಗರ ಕವಚ” ಅಣಕು ಕಾರ್ಯಾಚರಣೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಈ ಅಣಕು ಕಾರಾಚರಣೆಯಲ್ಲಿ 25 ಕಡೆಗಳಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸಲು ಪ್ರಯತ್ನಿಸಿದ್ದು. ಅದನ್ನು ತಡೆಗಟ್ಟುವಲ್ಲಿ ಕರಾವಳಿ ಕಾವಲು ಪೊಲೀಸ್ ಮತ್ತು ಮೂರು ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯು ಕರ್ನಾಟಕ ಕರಾವಳಿ ತೀರ ಪ್ರದೇಶದ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಸದೃಡಗೊಳಿಸಲು ಸಹಕಾರಿಯಾಗಿದೆ ಎಂದು ಪೊಲೀಸರ ತಿಳಿಸಿದ್ದಾರೆ

Latest Indian news

Popular Stories