ಉಡುಪಿ: ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಇತರ ವಿದ್ಯಾರ್ಥಿನಿಯರ ಚಿತ್ರೀಕರಣ ನಡೆಸಿದ ಕುರಿತು ಇಂದು ಉಡುಪಿ ಎಸ್ಪಿ ಅಕ್ಷಯ್ ಹಾಕೆ ಮಚಿಂದ್ರ ಸ್ಪಷ್ಟೀಕರಣ ನೀಡಿದ್ದು, ಹಿಡನ್ ಕ್ಯಾಮೆರಾ ಮೂಲಕ ಚಿತ್ರೀಕರಿಸಿದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಿರುವ ವೀಡಿಯೋ ನಮ್ಮ ಮಾಹಿತಿಯ ಪ್ರಕಾರ ಎಲ್ಲೂ ಸಾಮಾಜಿಕ ಜಾಲತಾಣದಲ್ಲಿ ಹರಡಿಲ್ಲ. ಬೇರೆ ಬೇರೆ ಸಂದರ್ಭದ ವೀಡಿಯೋಗಳನ್ನು ಇಟ್ಟುಕೊಂಡು ಸಂಬಂಧ ಕಲ್ಪಿಸಲಾಗುತ್ತಿದೆ ಎಂದರು.ಸಾಮಾಜಿಕ ಮಾಧ್ಯಮದಲ್ಲಿ ಗೊಂದಲ ಸೃಷ್ಟಿಸುವ ಪೋಸ್ಟ್ ಹಾಕಬೇಡಿ. ದಾಖಲೆ ಇದ್ದರೆ ಹಂಚಿಕೊಳ್ಳಿ. ಪೊಲೀಸ್ ತನಿಖೆಗೆ ಸಹಕರಿಸಿ ಎಂದು ಹೇಳಿದರು.
ಯುವತಿಯರ ಮೊಬೈಲ್‌ನಲ್ಲಿ ಯಾವುದೇ ಫೋಟೋ ವೀಡಿಯೋ, ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿ ತಮ್ಮ ನಿಯಮವಳಿ ಪ್ರಕಾರ ಈ ಪ್ರಕರಣದಲ್ಲಿ ವ್ಯವಹರಿಸಿದ್ದಾರೆ. ಎಫ್.ಐ.ಆರ್ ಈ ಪ್ರಕರಣದಲ್ಲಿ ದಾಖಲಾಗಿಲ್ಲ. ಸು ಮೊಟೊ ಪ್ರಕರಣ ದಾಖಲಿಸಲೂ ನಮಗೆ ಈ ಪ್ರಕರಣದಲ್ಲಿ ಅಂತಹ ಯಾವುದೇ ದಾಖಲೆ ಲಭ್ಯವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.