ಉಡುಪಿ: ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮ ಹಟ್ಟಿಯಂಗಡಿ ಕ್ರಾಸ್ ಟೆಂಟ್ ಹೌಸ್ ನಿವಾಸಿ ಸಂತೋಷ ಭರತ ಸಾಳುಂಕೆ (26) ಎಂಬ ವ್ಯಕ್ತಿಯು ನವೆಂಬರ್ 5 ರಿಂದ ನಾಪತ್ತೆಯಾಗಿರುತ್ತಾರೆ.
5 ಅಡಿ 8 ಇಂಚು ಎತ್ತರ, ಕೋಲು ಮುಖ, ಗೋದಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂ.ಸಂಖ್ಯೆ: 0820-2526444, ಕುಂದಾಪುರ ವೃತ್ತ ಕಚೇರಿ ದೂ.ಸಂಖ್ಯೆ: 08254-230880, ಕುಂದಾಪುರ ಪೊಲೀಸ್ ಉಪಾಧೀಕ್ಷಕರ ಕಚೇರಿ ದೂ.ಸಂಖ್ಯೆ: 08254-232338, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-237100 ಹಾಗೂ ಪಿಎಸ್ಐ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ: 9480805468 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
ಯುವಕ ನಾಪತ್ತೆ:
ಉಡುಪಿ: ನಗರದ ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆ ಎಂಬಲ್ಲಿ ವಾಸವಿದ್ದ ಸುಕೇಶ್ (26) ಎಂಬ ಯುವಕನು ಸೆಪ್ಟಂಬರ್ 11 ರಿಂದ ನಾಪತ್ತೆಯಾಗಿರುತ್ತಾರೆ.
5 ಅಡಿ 4 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ ಮೊ.ನಂ: 9480805448, ಪಿ.ಎಸ್.ಐ ಮೊ.ನಂ: 9480805475 ಹಾಗೂ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ವೃದ್ಧ ನಾಪತ್ತೆ :
ಉಡುಪಿ: ಹೆಬ್ರಿಯ ನಾಲ್ಕೂರು ಗ್ರಾಮದ ಮಿಯ್ಯಾರು ದೊಡ್ಡಮನೆ ಎಂಬಲ್ಲಿ ವಾಸವಿದ್ದ ರಾಮಣ್ಣ ಶೆಟ್ಟಿ (70) ಎಂಬ ವೃದ್ಧರು ನವೆಂಬರ್ 5 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
5 ಅಡಿ 2 ಇಂಚು ಎತ್ತರ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.