Udupi
ಉಡುಪಿ: ಇಬ್ಬರು ನಾಪತ್ತೆ

ಉಡುಪಿ: ಕುಂದಾಪುರ ಮತ್ತು ಹೆಬ್ರಿಯ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಕಾಣೆಯಾಗಿದ್ದಾರೆ.
ಕುಂದಾಪುರದ ಹಟ್ಟಿಯಂಗಡಿ ಗ್ರಾಮದ ಸಂತೋಷ (26) ಎಂಬುವವರು ಕಾರಣ ಹೇಳದೆ ಮನೆ ಬಿಟ್ಟು ಹೋಗಿದ್ದಾರೆ.
ಇವರ ಪತ್ನಿ ನೀಡಿದ ದೂರಿನ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2024 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹೆಬ್ರಿ: ರಾಮಣ್ಣ (70) ಎಂಬುವವರು ಕಾಣೆಯಾಗಿರುವ ಕುರಿತು ಅವರ ಮಗ ನೀಡಿದ ದೂರಿನ ಅನ್ವಯ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2024 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.