ಉದ್ಯಾವರ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ಉದ್ಯಾವರ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಮೃತ ದೇಹವು ಇಂದು ಸಂಜೆ ಉದ್ಯಾವರ ಅಂಕುದ್ರು ಎಂಬಲ್ಲಿ ಪತ್ತೆಯಾಗಿದೆ

ಉಡುಪಿ ನಗರದ ಕೋರ್ಟ್ ರಸ್ತೆಯ ನಿವಾಸಿ, ಉಡುಪಿ ಪೈ ಇಂಟರ್ನ್ಯಾಷನಲ್ ಎಲೆಕ್ಟ್ರಾನಿಕ್ ಮಳಿಗೆಯ ಸೇಲ್ಸ್ ಮ್ಯಾನ್ ರವೀಂದ್ರ ಭಟ್( 55 ) ಎಂದು ಗುರುತಿಸಲಾಗಿದೆ

ಇವರು ಇಂದು ಬೆಳಗಿನ ಜಾವ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು ತನ್ನ ಸ್ಕೂಟರ್ ಅನ್ನು ಸೇತುವೆ ಮೇಲೆ ನಿಲ್ಲಿಸಿ ಮೇಲಿನಿಂದ ಹೊಳೆಗೆ ಹಾರಿ ನಾಪತ್ತೆಯಾಗಿದ್ದರು. ಸ್ಥಳಕ್ಕೆ ಆಗಮಿಸಿದ ಕಾಪು ಪೋಲೀಸರು ದೋಣಿ ಮೂಲಕ ಶೋಧ ಕಾರ್ಯಾ ನಡೆಸಿದ್ದು ಮೃತ ದೇಹವು ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ

Latest Indian news

Popular Stories