
ಸರಕಾರಿ ಉರ್ದು ಹಿ.ಪ್ರಾ.ಶಾಲೆ, ಹೂಡೆಯಲ್ಲಿ ಗಣಿತ ಕಲಿಕಾ ಆಂದೋಲನ
ಕೆಮ್ಮಣ್ಣು : ಸರಕಾರದ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಇದರ ಸಂಯುಕ್ತ ಸಂಯೋಜನೆಯೊಂದಿಗೆ ಸರಕಾರಿ ಉರ್ದು ಹಿ.ಪ್ರಾ.ಶಾಲೆ, ಹೂಡೆ ಇಲ್ಲಿ ಗಣಿತ ಕಲಿಕಾ ಆಂದೋಲನ ಶುಕ್ರವಾರ ನಡೆಯಿತು.
ತೋನ್ಸೆ ಗ್ರಾ ಪಂ ಕೆಮ್ಮಣ್ಣುವಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲಾ ಅವರು ವಿದ್ಯಾರ್ಥಿಗಳು ತಯಾರಿಸಿದ ನವಿಲಿನ ಚಿತ್ರಪಟವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಉಸ್ತಾದ್ ಸಾದಿಕ್ ಅವರು ವಹಿಸಿದ್ದರು.
ವೇದಿಕೆಯಲ್ಲಿ ಗ್ರಾ ಪಂ ಕಾರ್ಯದರ್ಶಿ ದಿನಕರ್, ಪಂಚಾಯತ್ ಸದಸ್ಯರುಗಳಾದ ಮಹಮ್ಮದ್ ಇದ್ರೀಸ್, ಕುಸುಮ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಅಪ್ಸರಿ, ಸ್ಬಯಂ ಸೇವಕರಾದ ಆಸಿಯಾ ಮತ್ತು ಶಬನಾ ಅವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ನೀಲಾವತಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಉದ್ಘಾಟನಾ ಕಾರ್ಯಕ್ರಮದ ಬಳಿಕ 4,5 ಮತ್ತು 6 ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯ ಪ್ರಶ್ನೆ ಪತ್ರಿಕೆ ವಿತರಿಸಿ ಸ್ಪರ್ಧೆ ನಡೆಸಿ ಅದರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಗ್ರಾ ಪಂ ಕೋರಿಕೆಯಂತೆ ಸೈಮ್ ಸಮೂಹ ಸಂಸ್ಥೆಯವರು ಒದಗಿಸಿದ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.




