Udupi

ದ್ವೇಷ ಅಳಿಸಿ -ದೇಶ ಉಳಿಸಿ | ವೆಲ್ಫೇರ್ ಪಾರ್ಟಿ ಉಡುಪಿ ವತಿಯಿಂದ ವಿಚಾರ ವಿನಿಮಯ ಕಾರ್ಯಕ್ರಮ

ದ್ವೇಷ ಅಳಿಸಿ -ದೇಶ ಉಳಿಸಿ ಅಭಿಯಾನವನ್ನು ಉಡುಪಿ ಜಿಲ್ಲೆಯ ಮಣಿಪಾಲ್ ಇನ್ ಸಭಾಂಗಣದಲ್ಲಿ ವಿಚಾರಗೋಷ್ಟಿಯನ್ಮು ಹಮ್ಮಿಕೊಳ್ಳಲಾಯಿತು.

ಚಿಂತಕ,ಇತಿಹಾಸಕಾರ ,ಮಾನವ ಹಕ್ಕು ಹೋರಾಟಗಾರ ಡಾ! ಪಣಿರಾಜ್ ಮತ್ತು CPIM ನ ಜಿಲ್ಲಾಧ್ಯಕ್ಷ ಬಾಲಕ್ರಿಷ್ಣ ಶೆಟ್ಟಿ ಅತಿಧಿಗಳಾಗಿ ವಿಷಯ ಮಂಡಿಸಿದರು . ನಂತರ ಸಭಿಕರಿಂದ ಬಂದ ಅಭಿಪ್ರಾಯ ಮತ್ತು ಸಲಹೆಗಳನ್ಮು ಪಡೆಯಲಾಯಿತು .

ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಅಧ್ಯಕ್ಷಿಯ ಭಾಷಣ ಮಾಡಿ,ಭಿನ್ನ,ಭಿನ್ನ ಅಭಿಪ್ರಾಯ ,ಸಿದ್ದಾಂತಗಳೊಂದಿಗೆ ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುತ್ತವೆ .ದೇಶದಲ್ಲಿ ಸಾವಿರಾರು ಪಕ್ಷಗಳು ಇವೆ. ಪರಸ್ಪರ ಅಭಿಪ್ರಾಯಗಳನ್ಮು ಗೌರವಿಸಿಕೊಂಡು ದೇಶದ ಪ್ರಗತಿಯ ಬಗ್ಗೆ ರಾಜಕೀಯ ಪಕ್ಷಗಳು ಚರ್ಚಿಸುವುದು ಒಂದು ಆರೋಗ್ಯವಂತ ಪ್ರಜಾಪ್ರಭುತ್ವ ದೇಶದ ಲಕ್ಷಣ.
ರಾಜಕೀಯ ಪಕ್ಷಗಳು ಮತದಾನದ ಮೂಲಕ ಮತಗಳನ್ನು ಪಡೆದನಂತರ ನಾಗರಿಕರ ಅಭಿಒ್ರಾಯಗಳನ್ಮು ಗೌರವಿಸುವುದು ,ನ್ಯಾಯಸಮ್ಮತ ಬೇಡಿಕಗಳನ್ಮು ಈಡೇರಿಸುವುದು ಮತ್ತು ಸಂವಿಧಾನವನ್ನು ಕನ್ನಡಿಯನ್ನಾಗಿ ಅಧಿಕಾರ ನಡೆಸುವುದು ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿರುತ್ತದೆ.

ಆದರೆ ರಾಜಕೀಯ ಪಕ್ಷಗಳ ನಡುವೆ ದ್ವೇಶ ಸ್ವಾಭಾವಿಕವಾಗಿದೆ ಅದಕ್ಕೆ ಮೌಲ್ಯ ರಹಿತ ರಾಜಕೀಯ ಸಿಧ್ದಾಂತವೇ ಕಾರಣ ಪ್ರಸ್ತುತ ಮತ್ತು ಕಳೆದ 09 ವರ್ಷಗಳ ಬಿಜೆಪಿ ನೇತ್ರತ್ವದ ಮೋದಿ ಸರಕಾರ ,ದ್ವೇಶವೇ ರಾಜಕಾರಣ ಮತ್ತು ಅಧಿಕಾರಕ್ಕಾಗಿ ದ್ವೇಶವನ್ನೇ ಮೆಟ್ಟಿಲನ್ನಾಗಿ ಮಾಡಿದೆ

ಅದಕ್ಜೆ ಅದು ಸರಕಾರಿ ಸಂಸ್ದೆಗಳನ್ನು ಸರ್ವಾಧಿಕಾರಿಯಂತೆ ಬಳಸುತ್ತಿದೆ.ಇಂತಹಾ ಸಂಧರ್ಭದಲ್ಲಿ ಭಿನ್ನ ಭಿನ್ನ ರಾಜಕೀಯ ಪಕ್ಷದ ,ಸಂಘಟನೆಗಳ ಮುಖಂಡರುಗಳು ದೇಶದ ಪ್ರಗತಿಯ ಬಗ್ಗೆ ಚರ್ಚಿಸಲು ಒಂದು ರಾಜಕೀಯ ಪಕ್ಷದ ಆಮಂತ್ರಣವನ್ನು ಸ್ವೀಕರಿಸಿ ಸೇರಿ ಚರ್ಚಿಸುತ್ತಿರುವುದು ಮುಂದಿನ ದಿನಗಳಲ್ಲಿ ದ್ವೇಶ ಮತ್ತು ಸುಳ್ಳಿನ ವೇಗಕ್ಕೆ ಕಡಿವಾಣ ಹಾಕಬಹುದು ಎಂಬ ವಿಶ್ವಾಸ ಮೂಡಿದೆ ‌ಅದಕ್ಕಾಗಿ WPI ಇಂದು ಆಯೋಜಿಸಿದ ವಿಚಾರಗೋಷ್ಟಿಯಲ್ಲಿ ತಾವೆಲ್ಕರು ಭಾಗವಹಿಸಿದ್ದೀರಿ ಅದಕ್ಕೆ ತಮಗೆಲ್ಕರಿಗೂ ಅಭಿನಂದನೆಗಳು.ಮುಂದಿನ ದಿನಗಳಲ್ಲಿ ಇಂತಹಾ ಚರ್ಚಿಗಳ ಆಹ್ವಾನಗಳನ್ನು ಒಂದು ರಾಜಕೀಯ ಪಕ್ಷವಾಗಿ WPI ಸ್ವೀಕರಿಸುತ್ತದೆ ,ಗೌರವುಸುತ್ತದೆ ಮತ್ತು ನಮ್ಮ ಅಭಿಪ್ರಾಯಗಳನ್ನೂ ಮಂಡಿಸುತ್ತದ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ಇದ್ರೀಸ್ ಹೂಡೆಯವರು ತನ್ಮ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ಮು ಆಡಿದರು .

ವಿವಿಧ ರಾಜಕೀಯ ಪಕ್ಷದ ಮುಖಂಡರು ,ಸಂಘಟನೆಗಳ ಮುಖಂಡರು, ಬರಹಗಾರರು,ಚಿಂತಕರು ಸೇರಿ ಹಲವಾರು ಮಂದಿ ಭಾಗವಹಿಸಿದ್ದರು. ಧನ್ಯವಾದಗಳೊಂದಿಗೆ ಸಭೆಯ ಮುಕ್ತಾಯವನ್ನು ಘೋಷಿಸಲಾಯಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button