ಮೃತ ಹಂಪ್ ಬ್ಯಾಕ್ ಪ್ರಭೇದದ ಡಾಲ್ಪಿನ್ ಪತ್ತೆ

ಕಾರವಾರ: ಹಾರವಾಡ ಕಡಲತೀರದ ಗಾಬಿತವಾಡದಲ್ಲಿ ಮೃತ ಡಾಲ್ಪಿನ್ ಪತ್ತೆಯಾಗಿದೆ.

ಇದು ಅರಬ್ಬೀ ಸಮುದ್ರದಲ್ಲಿ ಸಿಗುವ ಹಂಪ್ ಬ್ಯಾಕ್ ಪ್ರಭೇದದ ಡಾಲ್ಪಿನ್ ಆಗಿದೆ.
ಡಾಲ್ಪಿನ್ 3.1 ಮೀಟರ್ ಉದ್ದ. ಇದ್ದು ಅಂದಾಜು 50 ವರ್ಷ ವಯಸ್ಸು ಎಂದು ರೀಪ್ ವಾಚ್ ಸಂಸ್ಥೆಯ ವೈದ್ಯೆ ಡಾ.ಶ್ರೇಯಾ
ತಿಳಿಸಿದ್ದಾರೆ.

ಕೋಸ್ಟಲ್ ಮರೀನ್ ಇಕೋ ಸಿಸ್ಟಮ್ ಅರಣ್ಯ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಅಂಕೋಲಾದ ಹಾರವಾಡದಲ್ಲಿ ಇಂದು ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.‌ ಡಾ.ಶ್ರೇಯಾ ಡಾಲ್ಪಿನ್ ಶವದ ಮರಣೋತ್ತರ ಪರೀಕ್ಷೆ ಮಾಡಿದ್ದು, ವಯೋ ಸಹಜ ಕಾರಣ ಸಾವನ್ನಪ್ಪಿದೆ ಎಂದು ವರದಿ ನೀಡಿದ್ದಾರೆ. ಡಾಲ್ಪಿನ್ ಶವವನ್ನು ಹಾರವಾಡದ
ಗಾಬಿತವಾಡ ಕಡಲತೀರದಲ್ಲಿ ಹೂಳಲು ಸಿದ್ಧತೆ ನಡೆದಿದೆ.

Latest Indian news

Popular Stories