ಗೇರುಸೊಪ್ಪ‌ ಡ್ಯಾಂ ಬಳಿ ಅಪಘಾತ: ಭಟ್ಕಳದ ವ್ಯಕ್ತಿಯ ಸಾವು; ಪತ್ನಿ ಗಂಭೀರ

ಕಾರವಾರ: ಗೇರುಸೊಪ್ಪ‌ ಡ್ಯಾಂ ಬಳಿ ಮಿನಿ ಬಸ್ ಹಾಗೂ ಓಮಿನಿ ಮಧ್ಯೆ ನಡೆದ ಅಪಘಾತದಲ್ಲಿ ಭಟ್ಕಳದ ಅಬ್ದುಲ್ ವಜೀದ್ (44) ಸಾವನ್ನಪ್ಪಿದರೆ, ಅವರ ಪತ್ನಿ ಗುಲ್ಶನ್ ಅರಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಬ್ದುಲ್ ವಜೀದ್ ಹಾಗೂ ಪತ್ನಿ ಭಟ್ಕಳ ದಿಂದ ಸಾಗರಕ್ಕೆ ಪಯಣಿಸುತ್ತಿದ್ದರು‌ . ಎದುರಿಗೆ ಬಂದ್ ಮಿನಿ ಬಸ್ ದಂಪತಿಗಳಿದ್ದ ಓಮಿನಿಗೆ ಮುಖಾ‌ಮುಖಿ ಡಿಕ್ಕಿ ‌ಹೊಡೆಯಿತು. ಗಾಯಾಳುಗಳನ್ನು ಸಾಗಿಸಲು ಅಂಬುಲೆನ್ಸ ಬರದೇ ಇದ್ದುದು, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಹೋದುದು ಗಾಯಾಳು ಸಾವಿಗೆ ಕಾರಣ ಎನ್ನಲಾಗಿದೆ.

ಪೊಲೀಸರು ಗಸ್ತು ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ತಂದರೂ ವೈದ್ಯರು ‌ಲಭ್ಯ ಇರಲಿಲ್ಲ ಎನ್ನಲಾಗಿದೆ. ನಂತರ ಗಾಯಾಳುಗಳನ್ನು ಉಡುಪಿಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಬ್ದುಲ್ ಕೊನೆಯುಸಿರೆಳೆದರು ಎನ್ನಲಾಗಿದೆ. ಅಬ್ದುಲ್ ವಾಜಿದ್ ಹಾಗೂ ಗುಲ್ಶನ್ ಅರಾ ದಂಪತಿಗಳು ಭಟ್ಕಳದ ಮುಗ್ದಂ ಕಾಲೂನಿ‌ ನಿವಾಸಿಗಳು ಎಂದು ತಿಳಿದು ಬಂದಿದೆ.‌
ಗೇರುಸೊಪ್ಪೆ‌ ಡ್ಯಾಮ್‌ ಬಳಿ ನಡೆದ‌ ಅಪಘಾತ ಭೀಕರ‌ವಾಗಿತ್ತು ಎಂದು ಪೊಲೀಸರು ‌ತಿಳಿಸಿದ್ದಾರೆ.

Latest Indian news

Popular Stories