
Featured StoryUttara Kannada
ಮಹಿಷಿಗಳ ಹಿಂಡು ಕಾಯುವವನ ಮೇಲೆ ಕರಡಿ ದಾಳಿ
ಮಹಿಷಿಗಳ (ಎಮ್ಮೆ ಹಿಂಡು) ಕಾಯುವವ ಸಂಜೆ ಮನೆಗೆ ಮರಳುತ್ತಿದ್ದಾಗ ಕರಡಿ ಹಠಾತ್ತಾನೆ ದಾಳಿ ಮಾಡಿದೆ. ಈ ಘಟನೆ ದಾಂಡೇಲಿ ತಾಲೂಕಿನ ಪಣಸೋಲೆ ಗ್ರಾಮದ ಸನಿಹ ರವಿವಾರ ಸಂಜೆ ನಡೆದಿದೆ.
ಕಾರವಾರ : ಮಹಿಷಿಗಳ (ಎಮ್ಮೆ ಹಿಂಡು) ಕಾಯುವವ ಸಂಜೆ ಮನೆಗೆ ಮರಳುತ್ತಿದ್ದಾಗ ಕರಡಿ ಹಠಾತ್ತಾನೆ ದಾಳಿ ಮಾಡಿದೆ. ಈ ಘಟನೆ ದಾಂಡೇಲಿ ತಾಲೂಕಿನ ಪಣಸೋಲೆ ಗ್ರಾಮದ ಸನಿಹ ರವಿವಾರ ಸಂಜೆ ನಡೆದಿದೆ.
ಪಣಸೋಲೆ ಗ್ರಾಮ ನಿವಾಸಿ ಅಪ್ಪು ಬೊಮ್ಮ ಪಿಂಗಳೆ (34) ಕರಡಿ ದಾಳಿಯಿಂದ ಗಾಯಗೊಂಡಿದ್ದಾನೆ. ಕರಡಿ ದಾಳಿಯಿಂದ ಅಪ್ಪು ಬೊಮ್ಮನ ಸೊಂಟ, ಬೆನ್ನು,ಕೈ, ಭುಜಕ್ಕೆ ಗಾಯವಾಗಿದೆ.ಗಾಯಾಳುವನ್ನು ಕೂಡಲೇ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.ಒಂದೇ ವಾರದ ಅವಧಿಯಲ್ಲಿ ಕರಡಿ ದಾಳಿಯ ಎರಡನೇ ಪ್ರಕರಣವಾಗಿದೆ.ಬಾಮಣಗಿಯಲ್ಲಿ ವಾರದ ಹಿಂದೆ ದಾವಲ್ ಸಾಬ್ ಮೇಲೆ ಕರಡಿ ದಾಳಿ ನಡೆದಿತ್ತು.
ಪಣಸೋಲೆ ಗ್ರಾಮದ ಸುತ್ತ ಕರಡಿ ಓಡಾಟ ಹೆಚ್ಚಾಗಿದೆ.ಕಾರಣ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.




