Featured StoryUttara Kannada

ಭಟ್ಕಳ ಬಾಂಬ್ ಬೆದರಿಕೆ ಹಾಕಿದ ಆರೋಪಿ ನಿತಿನ್ ಶರ್ಮಾ ಬಂಧನ

ಕಾರವಾರ: ಭಟ್ಕಳ ನಗರ ಸ್ಪೋಟಿಸುವ ಬೆದರಿಕೆ ಮೇಲ್ ಮಾಡಿದವ ನಿತಿನ್ ಶರ್ಮಾನನ್ನು ಮೈಸೂರು ಜೈಲಿನಿಂದ ಕರೆ ತರಲಾಗಿದೆ.ಬಾಂಬ್ ಬೆದರಿಕೆ ಮೇಲ್ ಮಾಡುವ ಹೆಬ್ಯುಚಿಯಲ್ ಆರೋಪಿಯಾಗಿದ್ದು, ಹದಿನಾರು ಪ್ರಕರಣ ಇವನ ಮೇಲಿವೆ. ನಿತಿನ್ ಶರ್ಮ ಯಾನೆ ಖಾಲಿದ್ ,‌ ತಮಿಳು ನಾಡಿನ ತಿರುಮಲೊಉರಂನ ಕಣ್ಣನ್ ಗುರುಸ್ವಾಮಿ ಮೊಬೈಲ್ ಬಳಸಿ ,ಮೇಲ್ ಮಾಡಿದ್ದ. ಕೇರಳದ ಮನ್ನಾರ ಪೋಲೀಸರು ಈತನನ್ನು ಮೈಸೂರು ನಿಂದ ಕರೆದೊಯ್ಯಲು ಮೈಸೂರು ಠಾಣೆಯಲ್ಲಿ ಇದ್ದಾಗ ಈ ಘಟನೆ ಜುಲೈ ಹತ್ತರಂದು ಬೆಳಿಗ್ಗೆ ನಡೆದಿತ್ತು. ನೈನಿತಾಲ್ ಬಾಂಬ್ ಸ್ಪೋಟ ಹುಸಿ ಕರೆ ಪ್ರಕರಣ ದಲ್ಲಿ ನಿತಿನ್ ಶರ್ಮಾ ಗೆ ಎಂಟು ತಿಂಗಳ ಕಾರಾಗೃಹ ಶಿಕ್ಷೆ ಯಾಗಿತ್ತು. ಇವನನ್ನು ನಾಳೆ ‌ಭಟ್ಕಳ ನ್ಯಾಯಾಲಯದಲ್ಲಿ ಹಾಜರು ಮಾಡುವ ಸಾಧ್ಯತೆ ಇದೆ. ಆಂದ್ರಪ್ರದೇಶದ ,ದೆಹಲಿ, ಕರ್ನಾಟಕ, ಓಡಿಸ್ಸಾ ನಗರದಲ್ಲಿ ಸಹ ಈತ ಬಾಂಬ್ ಸ್ಫೋಟದ ಬೆದರಿಕೆ ಇಮೇಲ್ ಮಾಡಿದ್ದಕ್ಕೆ ಪ್ರಕರಣ ದಾಖಲಾಗಿವೆ.
….

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button