Uttara Kannada

ಉ.ಕ : ಪ್ರಜಾಧ್ವನಿ ಸಮಾವೇಶ: ಬೈಕ್ ಯಾತ್ರೆ ಮೂಲಕ ಶಕ್ತಿ ಪ್ರದರ್ಶನ

ಕಾರವಾರ (ಕುಮಟಾ ): ಇಲ್ಲಿನ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ಯಾತ್ರೆ ಮೂಲಕ ಕರಾವಳಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿದೆ.

ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಪುತ್ರಿ ಬೀನಾ ವೈದ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೈಕ್ ಯಾತ್ರೆ ಭಟ್ಕಳದ ಮುರುಡೇಶ್ವರದಿಂದ ಮಧ್ಯಾಹ್ನ ಹೊರಟಿತ್ತು. ಸಹಸ್ರಾರು ಸಂಖ್ಯೆಯ ಮಂಕಾಳ ವೈದ್ಯರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಡಾ.ಅಂಜಲಿ ನಿಂಬಾಳ್ಕರ್ ಅವರ ಅಭಿಮಾನಿಗಳು ಬೀನಾ ವೈದ್ಯ ನೇತೃತ್ವದೊಂದಿಗೆ ಗೇರುಸೊಪ್ಪ ವೃತ್ತಕ್ಕೆ ಆಗಮಿಸಿದರು.

ಅಲ್ಲಿಂದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಬೀನಾ ವೈದ್ಯರೊಂದಿಗೆ ತೆರೆದ ವಾಹನದಲ್ಲಿ ನಿಂತು ಬೈಕ್ ಸವಾರರೊಂದಿಗೆ ಬಿರು ಬಿಸಿಲಿನಲ್ಲೂ ಮುಖ್ಯಮಂತ್ರಿ ಕಾರ್ಯಕ್ರಮದ ಸಮಯಕ್ಕೆ ಸರಿಯಾಗಿ
ಕುಮಟಾಕ್ಕೆ ತಲುಪಿದರು. ರಸ್ತೆಯ ಅಕ್ಕಪಕ್ಕದ ಇಕ್ಕೆಲಗಳಲ್ಲಿ ನಿಂತು ನೋಡುತ್ತಿದ್ದ ಜನಕ್ಕೆ ಡಾ.ಅಂಜಲಿ ಹಾಗೂ ಬೀನಾ ವೈದ್ಯ ಕೈಬೀಸಿದರು.

ಸಹಸ್ರಾರು ಬೈಕ್‌ಗಳು ಹೆದ್ದಾರಿಯಲ್ಲಿ ಸಾಗುವ ಮೂಲಕ ಕಾಂಗ್ರೆಸ್ ಪಕ್ಷದ ಬಲ ತೋರಿಸಿದವು.l


……

1001008818 Uttara Kannada

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button