ಬಿಜೆಪಿ ಸಂಘಟನಾ ಪರ್ವ ಕಾರ್ಯಕ್ರಮ:ಪೋಸ್ಟರ್ ನಲ್ಲಿ ಬಿಜೆಪಿ ಎಂ.ಎಲ್ .ಸಿ. ಗಣಪತಿ ಉಳ್ವೇಕರ್ ಭಾವಚಿತ್ರ ನಾಪತ್ತೆ

ಕಾರವಾರ: ಬಿಜೆಪಿಯ ಕಾರವಾರ ಗ್ರಾಮೀಣ ಮಂಡಳ ಇಂದು ಕಾರವಾರದಲ್ಲಿ ಸಂಘಟನಾ ಪರ್ವ 2024 ರನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಪೋಸ್ಟರ್ ಗಳು ಕಾರವಾರ ನಗರದಲ್ಲಿ ರಾರಾಜಿಸುತ್ತಿದ್ದು. ಈ ಪೊಸ್ಟರ್ ನಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಪೋಟೋ ಕೈ ಬಿಟ್ಟಿರುವುದಕ್ಕೆ ಬಿಜೆಪಿಯಲ್ಲೇ ಇದೀಗ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಹಿಂದೆ ರಾಜ್ಯ ಮಟ್ಟದವರ ಕೈವಾಡ ಇದೆ ಎಂದು ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲೆ ಬಹಿರಂಗ ಚರ್ಚೆ ನಡೆಯುತ್ತಿದೆ.
ಕಾರ್ಯಕ್ರಮದ ವಿವರದ ಫ್ಲೆಕ್ಸ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ .ಎಸ್. ಯಡಿಯೂರಪ್ಪ, ವಿಧಾನ ಸಭೆಯ ವಿರೋಧಿ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧಿ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಉತ್ತರಕನ್ನಡ ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಕಾರವಾರ ಗ್ರಾಮೀಣ ಮಂಡಳ ಅಧ್ಯಕ್ಷ ಸುಭಾಸ್ ಗುನಗಿ ಪೋಟೋಗಳು ರಂಜಿಸುತ್ತಿದೆ. ಆದರೆ ಜಿಲ್ಲೆಯನ್ನು ಪ್ರತಿನಿಧಿಸುವ ಎಂಎಲ್ ಸಿ ಹಾಗೂ ಕಾರವಾರದ ಸ್ಥಳೀಯರು ಆದ ಗಣಪತಿ ಉಳ್ವೇಕರ್ ಅವರ ಪೋಟೋ ಹಾಕಿಲ್ಲ. ಇದೆಲ್ಲವನ್ನು ಗಮನಿಸಿದರೆ ಬಿಜೆಪಿಯಲ್ಲಿ ಎಲ್ಲವೂ ಎಲ್ಲರೂ ಸರಿಯಿಲ್ಲ, ಭಿನ್ನಮತ ಸ್ಪಷ್ಟವಾಗಿ ಕಾಣತೊಡಗಿದೆ. ಗಣಪತಿ ಉಳ್ವೇಕರ್ ಪೋಟೋ ಹಾಕದಿರುವ ನಿರ್ಧಾರದ ಹಿಂದೆ ಯಾರ ಕೈವಾಡ ಇದೆ ಎಂದು ಉಳ್ವೇಕರ್ ಬೆಂಬಲಿಗರಲ್ಲಿ ಚರ್ಚೆಯಾಗುತ್ತಿದೆ.
ಉಳ್ವೇಕರ್ ಮುಂದಿನ ಬಾರಿ ಕಾರವಾರ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾರವಾರದ ಮಾಜಿ ಶಾಸಕಿ ,ಹಾಲಿ ಬಿಜೆಪಿ ಉಪಾಧ್ಯಕ್ಷೆಗೆ ದೊರೆತಿರಬಹುದು ಎಂಬ ಮಾತು ಸಹ ಹರಿದಾಡುತ್ತಿದೆ.
ಬಿಜೆಪಿ ಮನಸ್ಥಿತಿಗೆ ಹೊಂದಾಣಿಕೆಯಾಗುವವರಲ್ಲ ಎಂಬ ಕಾರಣಕ್ಕೆ ಎಂಎಲ್ ಸಿ ಗಣಪತಿ ಉಳ್ವೇಕರ್ ಪೋಟೋ ಹಾಕಿರಲಿಕ್ಕಿಲ್ಲ ಎಂದು ಅವರ ಪೋಟೋವನ್ನು ಕೈ ಬಿಡಲಾಗಿದೆ ಎನ್ನುವ ಮಾತು ಕೇಳಿಬಂದಿದೆ.
ಒಬ್ಬ ಹಿಂದುಳಿದ ವರ್ಗದ ನಾಯಕರು.ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಗಣಪತಿ ಉಳ್ವೇಕರ್ ಪೋಟೋ ಬಿಟ್ಟಿರುವುದಕ್ಕೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ ಎನ್ನಲಾಗಿದೆ.
ಮಾಜಿ ಸಂಸದ ಅನಂತ ಕುಮಾರ್ ಪಕ್ಷದ ಚಟುವಟಿಕೆಯಿಂದ ಸದಾ ದೂರವಾಗಿ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತರಾದರು. ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಪಕ್ಷದಿಂದ ದೂರವಿದ್ದು ಹದಿನೆಂಟು ತಿಂಗಳಾಗಿದೆ. ಸ್ವತಃ ಶಾಸಕರೇ ಒಂದು ಕಾಲು ಬಿಜೆಪಿ ಯಿಂದ ಹೊರಗಿದೆ ಎಂದಿದ್ದಾರೆ. ಹಾಲಿ ಎಂಎಲ್‌ಸಿ ಉಳ್ವೇಕರ್ ಅವರ ಸರದಿ ಈಗ. ಬಿಜೆಪಿ ಯಿಂದ ಅಂತರ ಕಾಯ್ದುಕೊಳ್ಳ ತೊಡಗಿದ್ದಾರೆ. ಬಿಜೆಪಿಗೆ ಈ ಸುಳಿವು ಸಿಕ್ಕಿತೇ ಎಂಬ ಅನುಮಾನ ಸಹ ಕಾಡತೊಡಗಿದೆ.
…….