ಉ.ಕ | ನಾಡ ಬಾಂಬ್ ಸ್ಪೋಟ | ಕಾರಿಗೆ ಹಾನಿ : ಪ್ರಯಾಣಿಕರು ಪಾರು

ಕಾರವಾರ : ಜೊಯಿಡಾ ತಾಲೂಕಿನ ಗುಂದ ಗ್ರಾಮದ ಸಮೀಪ ಕಾರಿನಡಿ ಸಿಕ್ಕ ನಾಡ ಬಾಂಬ್ ಸ್ಫೋಟವಾದ ಘಟನೆ ನಡೆದಿದೆ. ಆದರೆ ಕಾರ್ ನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

IMG 20240702 WA0082 Uttara Kannada IMG 20240702 WA0081 Uttara Kannada

ಜೋಯಿಡಾದಲ್ಲಿ ನಡೆಯತ್ತಿದ್ದ ಜನ ಸಂಪರ್ಕ ಸಭೆಗೆ ಗುಂದದಿಂದ ಮೂವರು ಸ್ಟ್ರಿಂಜರ್ಸ್ ಪ್ರಯಾಣಿಸುತ್ತಿದ್ದ ಕಾರಿನಡಿ ನಾಡಬಾಂಬ್ ಬ್ಲಾಸ್ಟ್ ಆಗಿದೆ. ಪರಿಣಾಮ ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಮೂವರು ಸ್ಟ್ರಿಂಜರ್ಸ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಎನ್ನಲಾಗಿದೆ.

ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಳಸುವ ನಾಡ ಬಾಂಬ್ ರಸ್ತೆಯಲ್ಲಿ ಬಿದ್ದಿದ್ದು, ಅದರ ಮೇಲೆ ಕಾರಿನ ಟಯ‌ರ್ ಹತ್ತಿ ಸ್ಫೋಟ ಸಂಭವಿಸಿದೆ. ಜೊಯಿಡಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
…..

Latest Indian news

Popular Stories