ಕಾರವಾರ ಬಳಿ ಅರಬ್ಬೀ ಸಮುದ್ರದಲ್ಲಿ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಾವಿತ್ರಿಬಾಯಿ ಪುಲೆ, ಕಸ್ತೂರಬಾ ಗಾಂಧಿ ಹೆಸರಿನ ನೌಕೆಗಳಿಂದ ಕೌಶಲ್ಯ ಪ್ರದರ್ಶನ

ಕಾರವಾರ : ಭಾರತೀಯ ತಟರಕ್ಷಕ ಪಡೆಯ ದಿನಾಚರಣೆ ಅಂಗವಾಗಿ ಕಾರವಾರ ಸಮೀಪದ ಅರಬ್ಬೀ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ನೌಕೆಗಳಿಂದ ಸಾಹಸ ಪ್ರದರ್ಶನ ಶನಿವಾರ ನಡೆಯಿತು.

ಇಂಡಿಯನ್ ಕೋಸ್ಟ ಗಾರ್ಡ ನ ಸಂಸ್ಥಾಪನಾ ದಿನದ ಅಂಗವಾಗಿ ಕರಾವಳಿ ಕಾವಲು ಪಡೆಯ ಕಾರ್ಯಾಚರಣೆಗಳ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಮೀನುಗಾರರು ಮತ್ತು ಹಡಗುಗಳು ಸಂಕಷ್ಟಕ್ಕೆ ಸಿಲುಕಿದರೆ ಅವುಗಳ ರಕ್ಷಣಾ ಕಾರ್ಯಾಚರಣೆ ಬಗೆಯನ್ನು ಪ್ರದರ್ಶಿಸಲಾಯಿತು.

ಕಾರವಾರದ ಇಂಡಿಯನ್ ಕೋಸ್ಟ ಗಾರ್ಡ ಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಮುದ್ರದಲ್ಲಿ ಅಪಾಯದಲ್ಲಿದ್ದ ಮೀನುಗಾರರ ರಕ್ಷಣೆ, ಅಪಹರಣಗೊಂಡ ಬೋಟುಗಳ ರಕ್ಷಣೆ, ಬೋಟ್ ಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳ ನಿಯಂತ್ರಣ ವಿಧಾನ, ಶತ್ರುಗಳ ವಿರುದ್ದದ ಹೋರಾಟ ದ ಬಗ್ಗೆ ರೋಮಾಂಚಕ ಪ್ರಾತ್ಯಕ್ಷಿಕೆ ನಡೆಯಿತು.

ಕಾರ್ಯಾಚರಣೆಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯ ಐ.ಸಿ.ಜಿ.ಎಸ್. ವಿಕ್ರಮ, ಐ.ಸಿ.ಜಿ.ಎಸ್ . ಕಸ್ತೂರ್ಬಾ ಗಾಂಧಿ,ಐ.ಸಿ.ಜಿ.ಎಸ್. ಸಾವಿತ್ರಿ ಬಾಯಿ ಪುಲೆ, ಸಿ- 488 ನೌಕೆಗಳು ಭಾಗವಹಿಸಿದ್ದವು.

ಸಾರ್ವಜನಿಕರು, ಬಂದರು ಇಲಾಖೆಯ ಕುಟುಂಬದವರು ಈ ಕಾರ್ಯಾಚರಣೆ ವೀಕ್ಷಿಸಿದರು.
…..

Latest Indian news

Popular Stories