ಬಿಜೆಪಿ ಬ್ರಾಹ್ಮಣರ‌ ಸ್ವತ್ತು ಎಂಬ ಜಾತಿವಾದಿ ಹಾಡು ಎಬ್ಬಿಸಿದ ವಿವಾದ | ಕಾಗೇರಿಗೆ ಮುಳುವಾಗುವ ಸಾಧ್ಯತೆ ಹೆಚ್ಚು !

ಕಾರವಾರ: ಬ್ರಾಹ್ಮಣರೆಲ್ಲಾ ಒಂದಾಗಿ ಕಾಗೇರಿಯ‌ನ್ನು ಆರಿಸಿ ತರುವ ಎಂಬ ಶಾಸ್ತ್ರಿಯ ದಾಟಿಯ ಹಾಡು, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮುಳುವಾಗುವ ಸಾಧ್ಯತೆಗಳು ಹೆಚ್ಚಾಗಿ ಗೋಚರಿಸತೊಡಗಿವೆ. ಅತಿಯಾದ ಬ್ರಾಹ್ಮಣ ಸ್ವಜನ ಪಕ್ಷಪಾತದಿಂದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ‌ ಕಾಗೇರಿ ಈಗ ಮತ್ತೊಂದು ಹಳವಂಡಕ್ಕೆ ಸಿಲುಕಿದ್ದಾರೆ‌ . ಹಾಡಿನಲ್ಲಿ ಕಾಗೇರಿ ಸಾಧನೆಗಳನ್ನು ಕಟ್ಟಿ ಕೊಡಲಾಗಿದ್ದು, ಹಿಂದುಳಿದ ಜನಾಂಗಗಳು ಬಿಜೆಪಿ ಬೆಂಬಲಕ್ಕೆ ನಿಂತದ್ದ‌ನ್ನು ಕಡೆಗಣಿಸಲಾಗಿದೆ. ನಾಮಧಾರಿ,ಮಡಿವಾಳ, ಒಕ್ಕಲಿಗರು, ‌ದೈವಜ್ಞರು ಮುಂತಾದ ಜನಾಂಗಗಳನ್ನು ಕಡೆಗಣಿಸಲಾಗಿದೆ.


ನಾಮಧಾರಿಗಳು ಈ ಹಾಡನ್ನು ಕೇಳಿದರೆ ಕೆರಳಿ ಕೆಂಡಾಮಂಡಲವಾಗುವ ಸಾಧ್ಯತೆಗಳು ಹೆಚ್ಚು. ದಲಿತರು, ಶೋಷಿತ ಜನಾಂಗಗಳು ಬಿಜೆಪಿಯಿಂದ ಹೊರ ನಡೆವ ಸಾಧ್ಯತೆಗಳು ಹೆಚ್ಚು. ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಬೆಂಬಲಿಗರು ಈ‌ ಹಾಡನ್ನು ಪ್ರಶ್ನಿಸಿದ್ದು, ಕಾಗೇರಿ ಅವರೇ ನಿಮಗೆ ಹಿಂದುಳಿದ ವರ್ಗಗಳ ಮತಗಳು ಬೇಡವೇ ಎಂದು ಪ್ರಶ್ನಿಸಿದ್ದಾರೆ. ಅನಂತ ಕುಮಾರ್ ಹಿಂದುತ್ವ ವಿಷಯದಲ್ಲಿ ಎಷ್ಟೇ ಕಟ್ಟರ್ ಇರಲಿ, ‌ಹಿಂದುಳಿದ ವರ್ಗಗಳ ಜೊತೆ ನಿಲ್ಲುತ್ತಿದ್ದರು ಎಂಬುದು ಅವರ ವಿರೋಧಿಗಳು ಸಹ ಒಪ್ಪುತ್ತಾರೆ. ಈಗ ಬ್ರಾಹ್ಮಣ ಪ್ರೀತಿಯ ಹಾಡು ಕಾಗೇರಿಗೆ ಮುಳುವಾಗಿ ಹೋಗಿದೆ. ಅನಂತ ಕುಮಾರ್ ಹೆಗಡೆ ಬಣ ತಮ್ಮ ನಾಯಕನಿಗೆ ಟಿಕೆಟ್ ಸಿಗದ ನೋವಲ್ಲಿ ಒಳ ಹೊಡೆತ ನೀಡುತ್ತಿದೆ. ಅತ್ತ ಯಲ್ಲಾಪುರ ಶಾಸಕ ಹೆಬ್ಬಾರ್ ಬಿಜೆಪಿ ಗೆ ಕೈ ಕೊಟ್ಟಿದ್ದಾರೆ. ಅತ್ತ ಅನಂತ ಕುಮಾರ್ ಹೆಗಡೆ ತಂತ್ರದ ಮೂಲಕ ಹಣಿಯುತ್ತಿರುವಾಗ ಬ್ರಾಹ್ಮಣ ಜಾತಿ ಪ್ರೀತಿಯ ಹಾಡು ಬಿಜೆಪಿ ಗೆ ಮತ್ತೊಂದು ತಲೆ ನೋವಾಗಿ ಪರಿಣಮಿಸಿದೆ. ಶೋಷಿತ ವರ್ಗಗಳು ಬಿಜೆಪಿ ಅಜೆಂಡಾವನ್ನು ಈಗ ಅರ್ಥಮಾಡಿಕೊಳ್ಳತೊಡಗಿವೆ.
….
……

Latest Indian news

Popular Stories