Uttara Kannada

ಸಿ ಸ್ಟ್ರೇ ರೆಸಾರ್ಟನಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ: 9 ಜನರ ಮೇಲೆ ಪ್ರಕರಣ ದಾಖಲು

ಕಾರವಾರ: ಗೋಕರ್ಣ ವ್ಯಾಪ್ತಿಯ ದುಬ್ಬನ ಸಸಿ ಗ್ರಾಮದ ಸಿ ಸ್ಟ್ರೇ ರೆಸಾರ್ಟನಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ನಡೆಯುತ್ತಿದ್ದ ವೇಳೆ ಪಿಎಸ್ ಐ ಶಶಿಧರ ಕೆ.ಎಚ್. ಅವರ ತಂಡ ದಾಳಿ ಮಾಡಿದೆ. ದಾಳಿಯ ವೇಳೆ ಇಸ್ಪೀಟ್ ಜೂಜಾಟದಲ್ಲಿ ನಿರತರಾಗಿದ್ದ 9 ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಸೀ ಸ್ಟ್ರೇ ರೆಸಾರ್ಟ ರೂ.ನಂಬರ್ 6 ರಿಂದ ಇಸ್ಪೀಟ್ ಆಟಕ್ಕೆ ಬಳಸುವ ಎಲೆ, 77,480 ರೂ.ನಗದು, 34 ಟೂಕನ್ಸ, 7 ಮೊಬೈಲ್, 1 ಬೆಡ್ ಶೀಟ್, ಒಂದು ಸೆಂಟ್ರೋ ಕಾರ್ ವಶಕ್ಕೆ ಪಡೆಯಲಾಗಿದೆ. 80 ಕೆ ಪಿ ಆ್ಯಕ್ಟ ಅಡಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಪೀಟ್ ಆಟದಲ್ಲಿ ತೊಡಗಿದವರಲ್ಲಿ ಇಬ್ಬರು ಹೊನ್ನಾವರದವರು,‌ಏಳು ಜನ ಕುಮಟಾದವರು ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಜೂಜಾಟದ ಕೇಂದ್ರಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು,‌ಎಸ್ಲಿ ನಾರಾಯಣ ಅವರ ಬಿಗಿ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಜಿಲ್ಲೆಯ ಎಲ್ಲಾ ಪೋಲಿಸರು, ಸಿಪಿಐಗಳು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
….

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button