Uttara Kannada

ಹರ್ಯಾಣದ ‘ತೊಹಾನಾ ಕಾಲುವೆಯಲ್ಲಿ’ 11 ದಿನಗಳ ನಂತರ ಮಾಜಿ ಮಾಡೆಲ್ ‘ದಿವ್ಯಾ ಪಹುಜಾ’ ಶವ ಪತ್ತೆ

ನವದೆಹಲಿ:ಹತ್ಯೆಗೀಡಾದ ಮಾಜಿ ಮಾಡೆಲ್ ದಿವ್ಯಾ ಪಹುಜಾ ಅವರ ಮೃತದೇಹ ಇಂದು (ಜನವರಿ 13) ಹರಿಯಾಣದ ಕಾಲುವೆಯಲ್ಲಿ ಪೊಲೀಸರಿಗೆ ಪತ್ತೆಯಾಗಿದೆ. ತೋಹಾನಾ ಕಾಲುವೆಯಿಂದ ಸುಮಾರು 11 ದಿನಗಳ ನಂತರ ಆಕೆಯ ಶವ ಪತ್ತೆಯಾಗಿದೆ.

ಸುಮಾರು ಆರು ತಂಡಗಳು 27 ವರ್ಷದ ದಿವ್ಯಾ ಪಹುಜಾ ಕೊಲೆ ರಹಸ್ಯದ ತನಿಖೆ ನಡೆಸುತ್ತಿದ್ದವು.

ಆಕೆಯನ್ನು ಕೊಲೆಮಾಡಿ ದೇಹವನ್ನು ಪಂಜಾಬ್‌ನ ಕಾಲುವೆಗೆ ಎಸೆಯಲಾಗಿದೆ. ಮೃತದೇಹ ಕೊಚ್ಚಿಹೋಗಿ ಹರಿಯಾಣದ ಕಾಲುವೆಗೆ ತಲುಪಿದೆ. ಪೊಲೀಸರು ಪಂಜಾಬ್‌ನಿಂದ ಹರಿಯಾಣಕ್ಕೆ ಹೋಗುವ ಮಾರ್ಗವನ್ನು ತನಿಖೆ ಮಾಡಿ ನಂತರ ಶವವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮೊದಲು, ಮಾಜಿ ಮಾಡೆಲ್ ದಿವ್ಯಾ ಪಹುಜಾ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಬಾಲರಾಜ್ ಗಿಲ್ ಅವರನ್ನು ಗುರುವಾರ (ಜನವರಿ 11) ಗುರುಗ್ರಾಮ್ ಪೊಲೀಸರು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಗಿಲ್ ತನ್ನ ಕಾರನ್ನು ಬಸ್ ನಿಲ್ದಾಣದ ಬಳಿ ನಿಲ್ಲಿಸಿ ಪಂಜಾಬ್‌ನ ಪಟಿಯಾಲಾದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮೊದಲೇ ಮಾಹಿತಿ ಪಡೆದಿದ್ದರು. ಮತ್ತೋರ್ವ ಆರೋಪಿ ರವಿ ಬಂಗಾ ಇನ್ನೂ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button