
ಉತ್ತರ ಕನ್ನಡ | ಚಾಲಕ ವಿರೋಧಿ ಕಾನೂನು ಹಿಂಪಡೆಯುಲು ಆಗ್ರಹಿಸಿ ಪ್ರತಿಭಟನೆ
ಕಾರವಾರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಚಾಲಕ ವಿರೋಧಿ ಕಾನೂನನ್ನು ಹಿಂಪಡೆಯುವಂತೆ ಆಗ್ರಹಿಸಿ ಕಾರವಾರದಲ್ಲಿ ಮೆರವಣಿಗೆ ಮಾಡಲಾಯಿತು .
ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಮುನ್ನಾ ಗಣೇಶಪುರ ಅವರ ನೇತೃತ್ವದಲ್ಲಿ ಕಾರವಾರದ ಮಿತ್ರ ಸಮಾಜದಿಂದ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಕೇಂದ್ರ ಸರಕಾರ, ಮಂತ್ರಿ ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆ ಕೂಗಲಾಯಿತು . ಚಾಲಕ ಅಪಘಾತ ಪಡಿಸಿದರೆ, ಆತನ ಸ್ಥಳದಲ್ಲಿದ್ದು ಗಾಯಾಳುವನ್ನು ನೋಡಿಕೊಳ್ಳಬೇಕು, ಪೊಲೀಸ್ ಮಹಜರು ತನಕ ಸ್ಥಳದಲ್ಲಿ ಇರಬೇಕು ಎಂಬ ಕಾನೂನು ಅವೈಜ್ಞಾನಿಕ. ಇದರಿಂದ ಚಾಲಕನ ಮೇಲೆ ಸ್ಥಳೀಯರು ಹಲ್ಲೆ ಮಾಡಬಹುದು ಎಂದು ಮುನ್ನ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೇಳಿದರು .
ಚಾಲಕ ಅಪಘಾತ ಪಡಿಸಿ, ಸ್ಥಳದಲ್ಲಿ ನಿಲ್ಲದಿದ್ದರೆ, 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ 7 ಲಕ್ಷ ದಂಡ ಎಂಬ ಕಾನೂನು ಅಮಾನವೀಯ. ಈ ಕಾನೂನಿಗೆ ರಾಷ್ಟ್ರಪತಿ ಅಂಕಿತ ಸಹ ಆಗಿದೆ. ಇದನ್ನು ರಾಜ್ಯ ಸರಕಾರ ವಿರೋಧಿಸಬೇಕು ಎಂದರು. ಚಾಲಕರು ಕೇಂದ್ರ ಸರ್ಕಾರದ ಕಾನೂನು ವಿರೋಧಸಿ ,ಚಾಲಕರನ್ನು ರಕ್ಷಿಸಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಮಾಡಿದರು. ಮನವಿ ನೀಡುವಾಗ ನಿಖಿಲ್, ಅಶೋಕ್ ಅಂಬಿಗಾ, ಗಣೇಶ್, ರಾಜೇಶ್ ,ಇಮಾಮ್ ಸೇರಿದಂತೆ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಇದ್ದರು. ಎಸಿ ಕನಿಷ್ಕ ಮನವಿ ಸ್ವೀಕರಿಸಿದರು.




